ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಳು, ಚಿನ್ನಾಭರಣ ರಫ್ತು ಶೇ 18ರಷ್ಟು ಕುಸಿತ

Published : 23 ಸೆಪ್ಟೆಂಬರ್ 2024, 15:24 IST
Last Updated : 23 ಸೆಪ್ಟೆಂಬರ್ 2024, 15:24 IST
ಫಾಲೋ ಮಾಡಿ
Comments

ಮುಂಬೈ: ಜಾಗತಿಕವಾಗಿ ಬೇಡಿಕೆ ಕುಸಿದಿದ್ದರಿಂದ ಆಗಸ್ಟ್‌ ತಿಂಗಳಲ್ಲಿ ದೇಶದ ಹರಳು ಮತ್ತು ಚಿನ್ನಾಭರಣದ ರಫ್ತು ಪ್ರಮಾಣ ಶೇ 18ರಷ್ಟು ಇಳಿಕೆಯಾಗಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿಯ (ಜಿಜೆಇಪಿಸಿ) ಅಂಕಿ–ಅಂಶಗಳು ಸೋಮವಾರ ತಿಳಿಸಿವೆ.

2023ರ ಆಗಸ್ಟ್‌ನಲ್ಲಿ ₹20,638 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತಾಗಿದ್ದರೆ, ಈ ಬಾರಿ ₹16,794 ಕೋಟಿ ಮೌಲ್ಯದಷ್ಟು ರಫ್ತಾಗಿದೆ ಎಂದು  ತಿಳಿಸಿವೆ. ಜುಲೈನಲ್ಲಿ ₹13,869 ಕೋಟಿ ಮೌಲ್ಯದಷ್ಟು ಸಾಗಣೆ ಆಗಿತ್ತು. ಇದಕ್ಕೆ ಹೋಲಿಸಿದರೆ ಏರಿಕೆಯಾಗಿದೆ ಎಂದು ತಿಳಿಸಿದೆ.‌

ಕತ್ತರಿಸಿದ ಮತ್ತು ಪಾಲಿಷ್‌ ಮಾಡಿದ ವಜ್ರಗಳ ರಫ್ತು ಮೌಲ್ಯವು ₹8,355 ಕೋಟಿಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 26ರಷ್ಟು ಕುಸಿದಿದೆ. ಆದರೆ, ಚಿನ್ನಾಭರಣಗಳ ಒಟ್ಟು ರಫ್ತು ಮೌಲ್ಯ ₹5,746 ಕೋಟಿಯಾಗಿದೆ ಎಂದು ತಿಳಿಸಿವೆ.

‘ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶೀಯವಾಗಿ ಹರಳು ಮತ್ತು ಆಭರಣ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಕಾಮಾ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಷಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT