ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಜಿಯೋದಲ್ಲಿ ₹6598.38 ಕೋಟಿ ಹೂಡಿಕೆ ಮಾಡಲಿದೆ ಜನರಲ್ ಅಟ್ಲಾಂಟಿಕ್

ಅಕ್ಷರ ಗಾತ್ರ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹6598.38 ಕೋಟಿ ಹೂಡಿಕೆ ಮಾಡುವುದಾಗಿ ಜನರಲ್ ಅಟ್ಲಾಂಟಿಕ್ ಈಕ್ವಿಟಿ ಸಂಸ್ಥೆ ಸೋಮವಾರ ಘೋಷಿಸಿದೆ. ಈ ಹೂಡಿಕೆಯಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಷೇರು ಮೌಲ್ಯ ₹4.91 ಲಕ್ಷ ಕೋಟಿಗೆ ಹಾಗೂ ಉದ್ಯಮ ಮೌಲ್ಯ ₹5.16 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಸಂಸ್ಥೆಯು ಹೇಳಿದೆ.

ಈ ಹೂಡಿಕೆಯೊಂದಿಗೆ, ನಾಲ್ಕು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟನರ್ಸ್ ಹಾಗೂ ಜನರಲ್ ಅಟ್ಲಾಂಟಿಕ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ₹67,194.75 ಕೋಟಿಹೂಡಿಕೆ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

‘ವಿಶ್ವದ ಅಗ್ರಮಾನ್ಯ ಹೂಡಿಕೆದಾರ ಸಂಸ್ಥೆ ಜನರಲ್ ಅಟ್ಲಾಂಟಿಕ್ ಅನ್ನು ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ಸಂತಸವಾಗುತ್ತಿದೆ. ಭಾರತದ ಬೆಳವಣಿಗೆಯ ಬೃಹತ್ ಸಾಮರ್ಥ್ಯದ ಮೇಲೆ ಅವರು ಇಟ್ಟಿರುವ ನಂಬಿಕೆ ಮೆಚ್ಚಬೇಕಾದ್ದು’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

‘ಜಾಗತಿಕ ತಂತ್ರಜ್ಞಾನ ನಾಯಕರು ಮತ್ತು ದೂರದೃಷ್ಟಿಯುಳ್ಳ ಉದ್ಯಮಿಗಳ ದೀರ್ಘಕಾಲೀನ ಬೆಂಬಲಿಗರಾಗಿ, ಜಿಯೋದಲ್ಲಿ ಹೂಡಿಕೆ ಮಾಡುವ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ’ ಎಂದು ಜನರಲ್ ಅಟ್ಲಾಂಟಿಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿಲ್ ಫೋರ್ಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT