ನಿರ್ದಿಷ್ಟ ಭೌಗೋಳಿಕ ಪ್ರದೇಶ ಗಳಲ್ಲಿ ಉತ್ಪಾದನೆ ಯಾಗುವ ಕೃಷಿ ಉತ್ಪನ್ನಗಳಿಗೆ ಮತ್ತು ವಸ್ತುಗಳಿಗೆ ನೀಡುವ ಭೌಗೋಳಿಕ ಸೂಚಕ ಸ್ಥಾನಮಾನವನ್ನು ಇತ್ತೀಚೆಗೆ ಗೋವಾದ ಗೋಡಂಬಿಗೆ ನೀಡಲಾಗಿದೆ.

ಭೌಗೋಳಿಕ ಸೂಚಕ ಸ್ಥಾನಮಾನವನ್ನು ಚೆನ್ನೈನಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಶನ್ಸ್ ರಿಜಿಸ್ಟ್ರಿ ಸಂಸ್ಥೆಯಿಂದ ನೀಡಲಾಗುತ್ತದೆ.

ಬಹುತೇಕ ಸಂದರ್ಭಗಳಲ್ಲಿ ಹೊರರಾಜ್ಯದಲ್ಲಿ ಬೆಳೆಯುತ್ತಿರುವ ಗೋಡಂಬಿಗೆ ಗೋವಾದ ಗೋಡಂಬಿ ಎನ್ನುವ ಹೆಸರನ್ನು ನೀಡಿ ತಯಾರಕರು ಮಾರಾಟ ಮಾಡುತ್ತಿದ್ದರು. ಇನ್ನು ಮೇಲೆ ಇತರೆ ರಾಜ್ಯಗಳಲ್ಲಿ ಉತ್ಪಾದನೆಯಾಗುತ್ತಿರುವ ಗೋಡಂಬಿಗೆ ಈ ಹೆಸರನ್ನು ಬಳಸಲು ಸಾಧ್ಯವಾಗುವುದಿಲ್ಲ.

ಗೋವಾ ಗೋಡಂಬಿ ಉತ್ಪಾದಕರ ಸಂಘಟನೆ, ಗೋವಾ ಸರ್ಕಾರ, ವಿಜ್ಞಾನ ಇಲಾಖೆ ಮತ್ತು ತ್ಯಾಜ್ಯ ನಿರ್ವಹಣೆ ಸಂಸ್ಥೆ, ಭೌಗೋಳಿಕ ಸೂಚಕ ಸ್ಥಾನಮಾನವನ್ನು ಕಲ್ಪಿಸುವಂತೆ ಅರ್ಜಿಯನ್ನು ಸಲ್ಲಿಸಿತ್ತು.

ಕಳಪೆ ಗುಣಮಟ್ಟದ ಗೋಡಂಬಿಗಳನ್ನೂ ಗೋವಾ ಗೋಡಂಬಿ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಕಾರಣದಿಂದ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಕರಣ ಘಟಕಗಳು ಮತ್ತು ತಯಾರಕರು ಸಂಕಷ್ಟದಲ್ಲಿದ್ದರು.

ಕಳೆದ 15 ವರ್ಷಗಳಲ್ಲಿ ಗೋವಾದ ಗೋಡಂಬಿ ಸಂಸ್ಕರಣೆ ಘಟಕಗಳ ಸಂಖ್ಯೆ 40 ರಿಂದ 15 ಕ್ಕೆ ಇಳಿದಿದೆ.

ಈ ಬೆಳೆಯನ್ನು ಮರು ಅರಣ್ಯೀಕರಣಕ್ಕಾಗಿ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಪೋರ್ಚುಗೀಸರು 16ನೇ ಶತಮಾನದಲ್ಲಿ ಬಿತ್ತನೆ ಪ್ರಾರಂಭಿಸಿದರು.

ಇದರ ರುಚಿ ಮತ್ತು ಪೌಷ್ಟಿಕಾಂಶತೆ ಬಗ್ಗೆ ಅರಿವು ಹೆಚ್ಚಾಯಿತು. ಮೊದಲ ಗೋಡಂಬಿ ಕಾರ್ಖಾನೆಯನ್ನು ಗೋವಾದಲ್ಲಿ 1926 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಗೋವಾದ ಗೋಡಂಬಿಯನ್ನು 1930 ರಿಂದ ಹೊರ ರಾಷ್ಟ್ರಗಳಿಗೆ ರಫ್ತು ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.