ಬುಧವಾರ, ಜೂಲೈ 8, 2020
25 °C

ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌

ವಿಶ್ವನಾಥ ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನದ ಬಾಂಡ್‌ ಹೂಡಿಕೆಯ ಸಂಕ್ಷಿಪ್ತ ಮಾಹಿತಿ...

ವಿತರಣೆ ದರ

ಆನ್‌ಲೈನ್‌: ಪ್ರತಿ ಗ್ರಾಂಗೆ ₹4,540

ಆಫ್‌ಲೈನ್‌: ಪ್ರತಿಗ್ರಾಂಗೆ ₹4,590

ಅವಧಿ: 8 ವರ್ಷ

ಅವಧಿ ಮುಗಿಯುವುದಕ್ಕೂ ಮುನ್ನ 5 ವರ್ಷಗಳ ಬಳಿಕ ನಗದೀಕರಿಸಬಹುದು

ಹೂಡಿಕೆ

ಕನಿಷ್ಠ 1 ಗ್ರಾಂ, ಗರಿಷ್ಠ 400 ಗ್ರಾಂ

ಹಿಂದೂ ಅವಿಭಕ್ತ ಕುಟುಂಬವು ಗರಿಷ್ಠ 4 ಕೆ.ಜಿ

ಟ್ರಸ್ಟ್‌ಗಳು 20 ಕೆ.ಜಿ

ತೆರಿಗೆ: ಚಿನ್ನದ ಬಾಂಡ್‌ ಹೂಡಿಕೆಗೆ ಬರುವ ಬಡ್ಡಿದರಕ್ಕೆ ಆದಾಯ ತೆರಿಗೆ ಕಾಯ್ದೆ 1961ರಂತೆ ತೆರಿಗೆ ಕಟ್ಟಬೇಕಾಗುತ್ತದೆ. ಬಾಂಡ್‌ ಮೌಲ್ಯವನ್ನು ಭೌತಿಕ ರೂಪದಲ್ಲಿ ಚಿನ್ನದ ರೂಪದಲ್ಲಿ ಪಡೆದರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸಲಿದೆ.

ಹೂಡಿಕೆಯ ಪ್ರಯೋಜನಗಳು

* ಆರಂಭಿಕ ಹೂಡಿಕೆಗೆ ವರ್ಷಕ್ಕೆ ಶೇ 2.50ರಂತೆ ಬಡ್ಡಿದರ ಸಿಗಲಿದೆ. ಅರ್ಧವರ್ಷಕ್ಕೆ ಬಡ್ಡಿದರ ಸಂದಾಯವಾಗಲಿದೆ

* ಭೌತಿಕ ರೂಪದ ಚಿನ್ನಕ್ಕಿಂತ ಉತ್ತಮ ಗಳಿಕೆ. ಇಂಡಿಯನ್‌ ಬುಲಿಯನ್ ಆ್ಯಂಡ್‌ ಜುವೆಲ್ಸ್‌ ಅಸೋಸಿಯೇಷನ್‌ ಘೋಷಿಸುವ ದರದ ಆಧಾರದ ಮೇಲೆ ಆರ್‌ಬಿಐ ನೀಡಿಕೆ ದರ ನಿಗದಿಪಡಿಸುತ್ತದೆ

* ಚಿನ್ನಾಭರಣಗಳ ಖರೀದಿಗೆ ಇರುವಂತೆ ತಯಾರಿಕಾ ಶುಲ್ಕ, ಜಿಎಸ್‌ಟಿ ಇರುವುದಿಲ್ಲ. ಶುದ್ಧತೆಯ ಸಮಸ್ಯೆಯೂ ಉದ್ಭವಿಸುವುದಿಲ್ಲ

* ವಾರ್ಷಿಕ ವೆಚ್ಚ ಇರುವುದಿಲ್ಲ

* ಬಾಂಡ್‌ ರೂಪದಲ್ಲಿ ಪಡೆದರೆ ಬಂಡವಾಳ ಗಳಿಕೆ ತೆರಿಗೆ ಇಲ್ಲ

* ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ ನೀಡುತ್ತದೆ

* ಬಾಂಡ್‌ ಖರೀದಿಗೆ  ಗರಿಷ್ಠ ₹ 20 ಸಾವಿರದವರೆಗೆ ನಗದು ಕೊಡಬಹುದು ಅಥವಾ ಡಿಮ್ಯಾಂಡ್‌ ಡ್ರಾಫ್ಟ್‌ ಅಥವಾ ಚೆಕ್‌ ನೀಡಬಹುದು

* ಸಾಲವನ್ನು ಪಡೆಯಲು ಚಿನ್ನದ ಬಾಂಡ್‌ ಅನ್ನು ಆಧಾರವಾಗಿ ಇಡಬಹುದು

 * ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಬಹುದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು