ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಆಮದು ಶೇ 35ರಷ್ಟು ಹೆಚ್ಚಳ

ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕ
Last Updated 13 ಆಗಸ್ಟ್ 2019, 5:23 IST
ಅಕ್ಷರ ಗಾತ್ರ

ನವದೆಹಲಿ: ಈ ಹಣಕಾಸು ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ದೇಶದ ಚಿನ್ನದ ಆಮದು ಶೇ 35.5ರಷ್ಟು ಹೆಚ್ಚಾಗಿದ್ದು, ₹ 80 ಸಾವಿರ ಕೋಟಿಗೆ ತಲುಪಿದೆ.

2018–19ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 59 ಸಾವಿರ ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಚಿನ್ನದ ಆಮದು ಹೆಚ್ಚಾಗಿರುವುದರಿಂದ ದೇಶದ ವ್ಯಾಪಾರ ಕೊರತೆ ಅಂತರವು ₹ 3.19 ಲಕ್ಷ ಕೋಟಿಯಿಂದ ₹ 3.26 ಲಕ್ಷ ಕೋಟಿಗೆ ಏರಿಕೆಯಾಗಿದೆ.

2019ರಲ್ಲಿ ಫೆಬ್ರುವರಿ ತಿಂಗಳು ಹೊರತುಪಡಿಸಿ, ಇದುವರೆಗೆ ಚಿನ್ನದ ಆಮದು ಎರಡಂಕಿ ಪ್ರಗತಿ ಕಂಡಿದೆ. ಫೆಬ್ರುವರಿಯಲ್ಲಿ ಮಾತ್ರವೇ ಶೇ 11ರಷ್ಟು ಇಳಿಕೆ ಕಂಡಿತ್ತು.

ವ್ಯಾಪಾರ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಚಿನ್ನದ ಆಮದು ಸುಂಕವನ್ನು ಶೇ 10ರಿಂದ ಶೇ 12.5ಕ್ಕೆ ಏರಿಕೆ ಮಾಡಿದೆ.

ಬೇಡಿಕೆ ಹೆಚ್ಚಳ: ಕ್ಯಾಲೆಂಡರ್‌ ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ಭಾರತದ ಚಿನ್ನದ ಬೇಡಿಕೆ ಶೇ 13ರಷ್ಟು ಏರಿಕೆಯಾಗಿದ್ದು, 189 ಟನ್‌ಗಳಿಗೆ ತಲುಪಿದೆ.

ಮೌಲ್ಯದ ಲೆಕ್ಕದಲ್ಲಿ ಶೇ 17ರಷ್ಟು ಹೆಚ್ಚಾಗಿದ್ದು ₹ 62,422 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 53,260 ಕೋಟಿ ಇತ್ತು ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಮಾಹಿತಿ ನೀಡಿದೆ.

ಚಿನ್ನದ ಮೇಲಿನ ಹೂಡಿಕೆಯು ಶೇ 13ರಷ್ಟು ಹೆಚ್ಚಾಗಿದೆ.

‘ವ್ಯಾಪಾರ ಉತ್ತೇಜನ, ಶುಭ ದಿನಗಳು ಹಾಗೂ ಏಪ್ರಿಲ್‌ ಮತ್ತು ಮೇನಲ್ಲಿ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ಗ್ರಾಹಕರಿಂದ ಖರೀದಿ ಚಟುವಟಿಕೆ ಹೆಚ್ಚಾಗಿತ್ತು’ ಎಂದು ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT