ಭಾನುವಾರ, ಏಪ್ರಿಲ್ 5, 2020
19 °C

ಚಿನ್ನದ ದರ ಕಳೆದ ಐದು ವಹಿವಾಟುಗಳಲ್ಲಿ ₹5,000 ಇಳಿಕೆ: 10 ಗ್ರಾಂಗೆ ₹39,041

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚಿನ್ನದ ಆಭರಣಗಳ ಸಂಗ್ರಹ

ನವದೆಹಲಿ: ಚಿನ್ನದ ದರ ಮಂಗಳವಾರ 10 ಗ್ರಾಂಗೆ ₹477 ಕಡಿಮೆಯಾಗಿ ₹39,041 ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಏಪ್ರಿಲ್‌ನ ಚಿನ್ನದ ಫ್ಯೂಚರ್ಸ್‌ ಶೇ 1.21ರಷ್ಟು ಕಡಿಮೆಯಾಗಿದೆ. 

10 ಗ್ರಾಂಗೆ ₹44,500 ಇದ್ದ ಚಿನ್ನದ ದರ ಕಳೆದ ಐದು ವಹಿವಾಟುಗಳಲ್ಲಿ ₹5,000 ಇಳಿಕೆಯಾಗಿದೆ. ಬೆಳ್ಳಿ ದರವೂ ಶೇ 1.7ರಷ್ಟು ಇಳಿಕೆಯಾಗಿ ಪ್ರತಿ ಕೆ.ಜಿಗೆ ₹35,593 ಮುಟ್ಟಿದೆ. ಕಳೆದ ವಹಿವಾಟುಗಳಲ್ಲಿ ಪ್ರತಿ ಕೆ.ಜಿ. ಬೆಳ್ಳಿ ಫ್ಯೂಚರ್ಸ್‌ ಶೇ 10ರಷ್ಟು (₹4,200) ಕಡಿಮೆಯಾಗಿದೆ.

ಇನ್ನೂ ಜೂನ್‌ನ ಚಿನ್ನದ ಫ್ಯೂಚರ್ಸ್‌ ಸಹ ಶೇ 1.39ರಷ್ಟು ಕುಸಿದಿದ್ದು, ₹554 ಕಡಿಮೆಯಾಗಿದೆ. ಪ್ರತಿ 10 ಗ್ರಾಂಗೆ ₹39,335 ಆಗಿದೆ. ಜಾಗತಿಕ ಮಟ್ಟದಲ್ಲಿ ಸಹ ಚಿನ್ನದ ದರ ಇಳಿಕೆಯಾಗಿದ್ದು, ಪ್ರತಿ ಔನ್ಸ್‌ (28.34 ಗ್ರಾಂ.) ಚಿನ್ನಕ್ಕೆ 1,483.60 ಡಾಲರ್‌ನಲ್ಲಿ ವಹಿವಾಟು ನಡೆದಿದೆ. 

ಕೋವಿಡ್‌–19 ಪ‍್ರಭಾವದಿಂದ ಜಾಗತಿಕ ಷೇರುಪೇಟೆಗಳಲ್ಲಿ ಚಂಚಲತೆ ಮುಂದುವರಿದಿರುವುದರಿಂದ ಹೂಡಿಕೆದಾರರು ಚಿನ್ನದ ಫ್ಯೂಚರ್ಸ್‌ ಹೂಡಿಕೆ ಸುರಕ್ಷಿತ ಹಾದಿ ಎಂದೇ ಭಾವಿಸಿದ್ದರು. ಪೇರುಪೇಟೆ ಇಳಿಮುಖವಾಗಿರುವುದರಿಂದ ಫ್ಯೂಚರ್ಸ್‌ ಮಾರಾಟ ಮಾಡಿ ಹಣ ಪಡೆಯಲು ಮುಂದಾಗಿದ್ದಾರೆ. 

ಅಮೆರಿಕದ ಷೇರುಪೇಟೆಗಳಲ್ಲಿ ರಾತ್ರಿ ಶೇ 13ರಷ್ಟು ಕುಸಿತ ಉಂಟಾಗಿದೆ. 1987ರಿಂದ ಮೊದಲ ಬಾರಿಗೆ ಅತಿ ದೊಡ್ಡ ನಷ್ಟ ದಾಖಲಾಗಿದ್ದು, ಇದರ ಪರಿಣಾಮ ಜಾಗತಿಕ ಷೇರುಪೇಟೆಗಳ ಮೇಲೂ ಆಗಿದೆ. ಏಷ್ಯಾದ ಷೇರುಪೇಟೆಗಳಲ್ಲಿ ಏರಿಳಿತದಿಂದ ತಲ್ಲಣ ಉಂಟಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು