ಭಾನುವಾರ, ಜೂಲೈ 5, 2020
27 °C

ಹೂಡಿಕೆ ಆಕರ್ಷಿಸಿದ ಚಿನ್ನದ ಇಟಿಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆರು ಹಣಕಾಸು ವರ್ಷಗಳ ಬಳಿಕ 2019–20ರಲ್ಲಿ ಚಿನ್ನದ ಇಟಿಎಫ್‌ (ಷೇರು ವಿನಿಮಯ ವಹಿವಾಟು ನಿಧಿ) ಬಂಡವಾಳ ಆಕರ್ಷಿಸು ವಲ್ಲಿ ಸಫಲವಾಗಿದೆ.

‘ಜಗತ್ತಿನಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಇದರಿಂದಾಗಿ ಹೂಡಿಕೆದಾರರು ಚಿನ್ನ ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳ ಮೇಲೆ ಹೂಡಿಕೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ವ್ಯವಸ್ಥಾಪಕ ಸಂಶೋಧಕ ಹಿಮಾಂಶು ಶ್ರೀವಾಸ್ತವ ಅವರು ಹೇಳಿದ್ದಾರೆ.

ಈ ಹೂಡಿಕೆಯಿಂದ ಚಿನ್ನದ ನಿಧಿಗಳ ನಿರ್ವಹಣಾ ಸಂಪತ್ತು ಮಾರ್ಚ್‌ ಅಂತ್ಯಕ್ಕೆ ಶೇ 79ರಷ್ಟು ಹೆಚ್ಚಾಗಿ ₹7,949 ಕೋಟಿಗೆ ತಲುಪಿದೆ. 2019ರ ಮಾರ್ಚ್‌ ಅಂತ್ಯದಲ್ಲಿ ಇದು ₹ 4,447 ಕೋಟಿಗಳಷ್ಟಿತ್ತು ಎಂದು ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ. ಕಳೆದ ಕೆಲವು ವರ್ಷಗಳಲ್ಲಿ ರಿಟೇಲ್‌ ಹೂಡಿಕೆದಾರರು ಚಿನ್ನದ ಇಟಿಎಫ್‌ಗಿಂತಲೂ ಷೇರುಗಳ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಿದ್ದರು.

‘ಷೇರುಪೇಟೆಯಲ್ಲಿ ಕೊರೊನಾ ವೈರಸ್ ಸೃಷ್ಟಿಸುತ್ತಿರುವ ಆತಂಕವು ಹೂಡಿಕೆದಾರರನ್ನು ಚಿನ್ನದೆಡೆಗೆ ಆಕರ್ಷಿಸುವಂತೆ ಮಾಡುತ್ತಿದೆ’ ಎಂದು ಗ್ರೋವ್‌ ಕಂಪನಿಯ ಸಹ ಸ್ಥಾಪಕ ಹರ್ಷ್‌ ಜೈನ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು