ಭಾನುವಾರ, ಮಾರ್ಚ್ 7, 2021
22 °C

ಚಿನ್ನದ ಬೆಲೆ ದಾಖಲೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಸೋಮವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗಳಿಗೆ ₹800ಕ್ಕೂ ಹೆಚ್ಚು ಏರಿಕೆ ಕಂಡಿದೆ. ಮುಂಬೈನಲ್ಲಿ ₹ 36,165ಕ್ಕೆ ಏರಿಕೆಯಾಗಿದೆ. ಶುಕ್ರವಾರ ಈ ದರ ₹ 35,271 ಇತ್ತು.

ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಳಗೊಂಡಿರುವುದರಿಂದ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆಗೆ ಹೆಚ್ಚು ಒಲವು ತೋರಿದ್ದಾರೆ.

ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳು ಚಿನ್ನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಡಾಲರ್‌ ಎದುರು ರೂಪಾಯಿ ಬೆಲೆಯು ಗಣನೀಯವಾಗಿ ಕುಸಿತ ಕಂಡಿದೆ. ಈ  ಎಲ್ಲ ಕಾರಣಕ್ಕೆ ದೇಶಿ ಮಾರುಕಟ್ಟೆಯಲ್ಲಿ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಬೆಲೆ ಶೇ 1.3ರಷ್ಟು ಹೆಚ್ಚಳಗೊಂಡು 1,457.30 ಡಾಲರ್‌ನಂತೆ (₹ 1,02,011) ಮಾರಾಟವಾಗಿದೆ.

ಜಾಗತಿಕ ಆರ್ಥಿಕತೆಯ ದುರ್ಬಲ ಮುನ್ನೋಟ, ಹೆಚ್ಚಿದ ವಾಣಿಜ್ಯ ಉದ್ವಿಗ್ನತೆ, ಷೇರುಪೇಟೆಗಳಲ್ಲಿ ಕುಗ್ಗಿರುವ ಖರೀದಿ ಉತ್ಸಾಹದ ಕಾರಣಕ್ಕೆ ಹೂಡಿಕೆದಾರರು ‘ಸುರಕ್ಷಿತ ಸ್ವರ್ಗ’ ಚಿನ್ನ ಖರೀದಿಗೆ  ಗಮನ ನೀಡುತ್ತಿದ್ದಾರೆ ಎಂದು ಜಿಯೊಜೀತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ  ಹರೀಶ್‌ ವಿ. ವಿಶ್ಲೇಷಿಸಿದ್ದಾರೆ.

ಬೆಳ್ಳಿ ಬೆಲೆ: ಬೆಳ್ಳಿ ಬೆಲೆಯು ಕೂಡ ಪ್ರತಿ ಕೆಜಿಗೆ ₹ 1,000 ರಂತೆ ಹೆಚ್ಚಳಗೊಂಡು ₹ 43,100ಕ್ಕೆ ತಲುಪಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು