ಭಾನುವಾರ, ನವೆಂಬರ್ 28, 2021
19 °C

ಬ್ರೆಂಟ್‌ ತೈಲ: ಬ್ಯಾರಲ್‌ಗೆ 90 ಡಾಲರ್‌ ದಾಟುವ ಸಂಭವ

ರಾಯಿಟರ್ಸ್/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌/ನವದೆಹಲಿ: ಜಾಗತಿಕ ತೈಲ ಬೇಡಿಕೆಯು ಮತ್ತೆ ಚೇತರಿಕೆ ಕಂಡಿರುವುದರಿಂದ ಬ್ರೆಂಟ್‌ ಕಚ್ಚಾತೈಲ ದರವು ವರ್ಷಾಂತ್ಯದ ವೇಳೆಗೆ ಬ್ಯಾರಲ್‌ಗೆ 90 ಡಾಲರ್‌ಗಳನ್ನೂ ಮೀರುವ ಸಾಧ್ಯತೆ ಇದೆ ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ಸಂಸ್ಥೆಯು ಸೋಮವಾರ ಹೇಳಿದೆ.

ಸಂಸ್ಥೆಯು ತನ್ನ ಈ ಹಿಂದಿನ ವರದಿಯಲ್ಲಿ ತೈಲ ದರವು ಬ್ಯಾರಲ್‌ಗೆ 90 ಡಾಲರ್‌ಗಳಿಗೆ ತಲುಪುವ ಅಂದಾಜು ಮಾಡಿರುವುದಾಗಿ ಹೇಳಿತ್ತು.

ಏಷ್ಯಾದಲ್ಲಿ ತೈಲ ಬಳಕೆಯು ಚೇತರಿಕೆ ಕಂಡಿದೆ. ಹೀಗಾಗಿ ಜಾಗತಿಕ ತೈಲ ಬೇಡಿಕೆಯು ಕೋವಿಡ್‌ಗೂ ಮುಂಚೆ ಪ್ರತಿ ದಿನಕ್ಕೆ ಇದ್ದ 10 ಕೋಟಿ ಬ್ಯಾರಲ್‌ಗಳಿಗೆ ಶೀಘ್ರವೇ ತಲುಪುವ ನಿರೀಕ್ಷೆ ಇದೆ ಎಂದು ಅದು ತಿಳಿಸಿದೆ.

ಪೂರೈಕೆಯಲ್ಲಿ ಕೊರತೆ ಮತ್ತು ಹೆಚ್ಚಾಗುತ್ತಿರುವ ಬೇಡಿಕೆಯಿಂದಾಗಿ ಕಚ್ಚಾ ತೈಲ ದರಗಳು ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ. ಬ್ರೆಂಟ್‌ ಕಚ್ಚಾ ತೈಲ ದರವು ಸೋಮವಾರ ಶೇ 0.73ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 85.26 ಡಾಲರ್‌ಗಳಿಗೆ ಏರಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು