ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ ದರ ಸರಳೀಕರಣ: ಸೆಪ್ಟೆಂಬರ್ 25ಕ್ಕೆ ಸಚಿವರ ಸಭೆ

Published : 22 ಸೆಪ್ಟೆಂಬರ್ 2024, 13:47 IST
Last Updated : 22 ಸೆಪ್ಟೆಂಬರ್ 2024, 13:47 IST
ಫಾಲೋ ಮಾಡಿ
Comments

ಪಿಟಿಐ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳಗೊಳಿಸಲು ರಚಿಸಿರುವ ಆರು ಸಚಿವರನ್ನು ಒಳಗೊಂಡ ಸಮಿತಿ  ಸಭೆಯು, ಸೆಪ್ಟೆಂಬರ್‌ 25ರಂದು ಗೋವಾದಲ್ಲಿ ನಡೆಯಲಿದೆ.

ಜಿಎಸ್‌ಟಿ ಅಡಿ ರಚಿಸಿರುವ ನಾಲ್ಕು ಸ್ಲ್ಯಾಬ್‌ಗಳ ಪರಿಷ್ಕರಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಆಗಸ್ಟ್‌ 22ರಂದು ಸಭೆ ನಡೆಸಿದ್ದ ಸಮಿತಿಯು ಈ ಕುರಿತ ವರದಿಯನ್ನು ಸೆಪ್ಟೆಂಬರ್‌ 9ರಂದು ನಡೆದ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಮಂಡಿಸಿತ್ತು.

ತೆರಿಗೆ ಪ್ರಮಾಣ ಸರಳಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಗೆ ಸಚಿವರು ಸೂಚಿಸಿದ್ದರು. ಪ್ರಸ್ತುತ ಜಿಎಸ್‌ಟಿ ಅಡಿ ಶೇ 5, ಶೇ 12, ಶೇ 18 ಹಾಗೂ ಶೇ 28ರಷ್ಟು ತೆರಿಗೆ ಸ್ಲ್ಯಾಬ್‌ಗಳಿವೆ.

ದಿನಬಳಕೆಯ ಅಗತ್ಯ ವಸ್ತುಗಳು ಕಡಿಮೆ ಸ್ಲ್ಯಾಬ್‌ನಲ್ಲಿವೆ. ಐಷಾರಾಮಿ ಮತ್ತು ತಂಬಾಕು, ಜಂಕ್‌ ಫುಡ್‌ಗಳನ್ನು ಅತಿಹೆಚ್ಚು ತೆರಿಗೆ ಸ್ಲ್ಯಾಬ್‌ಗೆ ಸೇರಿಸಲಾಗಿದೆ.

ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಶೇ 12 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ ಅನ್ನು ವಿಲೀನಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ. 

ಶೇ 12ರ ಸ್ಲ್ಯಾಬ್‌ನಡಿ ಜಿಎಸ್‌ಟಿ ವರಮಾನವು ಶೇ 15.3ಕ್ಕಿಂತ ಕಡಿಮೆಯಿದೆ. ಹಾಗಾಗಿ, ಸಭೆಯಲ್ಲಿ ಇದರ ಪರಿಷ್ಕರಣೆ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳು ಸ್ಲ್ಯಾಬ್‌ಗಳ ಪರಿಷ್ಕರಣೆಗೆ ಒಲವು ಹೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT