ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೊಳ್ಳುವಿಕೆ ಒಳ್ಳೆಯ ಉದ್ಯಮದ ಲಕ್ಷಣ: ಮಹೀಂದ್ರ ಸಮೂಹ ನಡೆಸಿದ ಅಧ್ಯಯನ

Last Updated 19 ನವೆಂಬರ್ 2020, 21:10 IST
ಅಕ್ಷರ ಗಾತ್ರ

ಮುಂಬೈ: ಉನ್ನತ ನೈತಿಕ ಮಟ್ಟವನ್ನು ಕಾಯ್ದುಕೊಳ್ಳುವುದು, ಸಮುದಾಯದ ಒಳಿತು ಮತ್ತು ಎಲ್ಲರನ್ನೂ ಒಳಗೊಳ್ಳುವ ತುಡಿತ ಹೊಂದಿರುವುದು ಒಳ್ಳೆಯ ವಾಣಿಜ್ಯೋದ್ಯಮದ ಲಕ್ಷಣಗಳು ಎಂಬ ಅಭಿಪ್ರಾಯವು ಮಹೀಂದ್ರ ಉದ್ಯಮ ಸಮೂಹ ನಡೆಸಿದ ಅಧ್ಯಯನವೊಂದರಲ್ಲಿ ವ್ಯಕ್ತವಾಗಿದೆ. ಸಮೂಹವು ತನ್ನ 75ನೆಯ ವಾರ್ಷಿಕೋತ್ಸವದ ಅಂಗವಾಗಿ ಈ ಅಧ್ಯಯನ ಕೈಗೊಂಡಿತ್ತು.

ವಾಣಿಜ್ಯ ಹಾಗೂ ವೃತ್ತಿಪರ ವಲಯಗಳ ಒಟ್ಟು 2,089 ಪ್ರತಿನಿಧಿಗಳನ್ನು ಸಂದರ್ಶಿಸಿ ಈ ಅಧ್ಯಯನ ನಡೆಸಲಾಗಿದೆ. ಒಟ್ಟು 10 ನಗರಗಳಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೂಡಿಕೆದಾರರು, ಗ್ರಾಹಕರು ಮತ್ತು ನೌಕರರ ದೃಷ್ಟಿಯಲ್ಲಿ ಒಳ್ಳೆಯ ಉದ್ಯಮವೆಂದರೆ ಏನು ಎಂಬುದನ್ನು ತಿಳಿದುಕೊಳ್ಳಲು ಈ ಅಧ್ಯಯನ ನಡೆಸಲಾಗಿತ್ತು ಎಂದು ಮಹೀಂದ್ರ ಸಮೂಹ ಹೇಳಿದೆ.

ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಒಳ್ಳೆಯ ಉದ್ಯಮವೆಂದರೆ ಏನು ಎಂಬ ಬಗ್ಗೆ ಜನರಲ್ಲಿ ಇರುವ ಆಲೋಚನೆಗಳ ಕುರಿತು ಈ ಅಧ್ಯಯನವು ಒಳನೋಟಗಳನ್ನು ಒದಗಿಸುತ್ತಿದೆ. ಒಳ್ಳೆಯ ಉದ್ಯಮದ ಬಗ್ಗೆ ಜನ ಹೊಂದಿರುವ ವ್ಯಾಖ್ಯಾನವು ಬದಲಾಗುತ್ತಿರುವುದನ್ನು ಕೂಡ ಇದು ತೋರಿಸುತ್ತಿದೆ ಎಂದು ಸಮೂಹವು ಹೇಳಿದೆ.

‘ಈಗಿನ ಸಂದರ್ಭದಲ್ಲಿ ಕಂಪನಿಗಳು ಬೀರುವ ಸಾಮಾಜಿಕ ಹಾಗೂ ಸಾಮುದಾಯಿಕ ಪ್ರಭಾವವನ್ನು ಆ ಕಂಪನಿಗಳ ಹಣಕಾಸಿನ ವಿವರಗಳಷ್ಟೇ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಮೊದಲಿಗಿಂತಲೂ ಹೆಚ್ಚು ಜನ ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಒಳ್ಳೆಯ ಉದ್ಯಮ ಅಂದರೆ ಏನು ಎಂಬ ಪ್ರಶ್ನೆಯು ಮೊದಲಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ’ ಎಂದು ಅಧ್ಯಯನವು ಹೇಳಿದೆ.

ಒಳ್ಳೆಯ ಉದ್ಯಮ ಅಂದರೆ ಹಣಕಾಸಿನ ಲಾಭಕ್ಕಿಂತಲೂ ಹೆಚ್ಚಿನದು ಎನ್ನುವ ಅಭಿಪ್ರಾಯವು ಶೇಕಡ 62ರಷ್ಟು ಪ್ರತಿನಿಧಿಗಳಿಂದ ವ್ಯಕ್ತವಾಗಿದೆ. 18ರಿಂದ 25 ವರ್ಷ ವಯಸ್ಸಿನವರೆಗಿನ ಪ್ರತಿನಿಧಿಗಳ ಪೈಕಿ ಶೇಕಡ 45ಕ್ಕಿಂತ ಹೆಚ್ಚಿನವರು ‘ನೈತಿಕತೆಗೆ, ಸಮುದಾಯದ ಒಳಿತಿಗಾಗಿ ಚಿಂತನೆ ನಡೆಸುವುದಕ್ಕೆ, ಎಲ್ಲರನ್ನೂ ಒಳಗೊಳ್ಳುವ ಧೋರಣೆ ಹೊಂದಿರುವುದಕ್ಕೆ ಆದ್ಯತೆ ನೀಡಿದ್ದಾರೆ’ ಎಂಬುದು ಅಧ್ಯಯನದಲ್ಲಿ
ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT