ಭಾನುವಾರ, ಏಪ್ರಿಲ್ 2, 2023
33 °C
ಉದ್ಯೋಗಿಗಳ ವಜಾಗೆ ಕಾರಣ ನೀಡಿದ ಗೂಗಲ್‌ ಸಿಇಒ

12,000 ಮಂದಿಯನ್ನು ವಜಾ ಮಾಡದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಿತ್ತು: ಪಿಚೈ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಇನ್ನಷ್ಟು ಕಠಿಣ ಸಮಸ್ಯೆ ಎದುರಿಸುವುದನ್ನು ತಪ್ಪಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಯ್ತು ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಗೂಗಲ್‌ನ ಒಟ್ಟು ಸಿಬ್ಬಂದಿಗಳ ಪೈಕಿ ಶೇ 6 ಅಂದರೆ 12,000 ಮಂದಿಯನ್ನು ಕೆಲಸದಿಂದ ಕಿತ್ತು ಹಾಕಿದ ಬೆನ್ನಲ್ಲೇ, ಅವರು ಈ ರೀತಿಯಾಗಿ ಹೇಳಿದ್ದಾರೆ.

ಕಂಪನಿಯ ಆಂತರಿಕ ಸಭೆಯಲ್ಲಿ ಪಿಚೈ ಈ ರೀತಿ ಹೇಳಿದ್ದಾಗಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

‘ಕಂಪನಿಯ ಸಂಸ್ಥಾಪಕರು ಹಾಗೂ ನಿರ್ದೇಶಕರೊಂದಿಗೆ ಚರ್ಚೆ ಮಾಡಿ ಸಿಬ್ಬಂದಿ ಸಂಖ್ಯೆಯನ್ನು ಶೇ 6 ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಯಿತು. ಒಂದು ವೇಳೆ ನಾವು ಸ್ಪಷ್ಟವಾಗಿ, ನಿರ್ಣಾಯಕವಾಗಿ ಮತ್ತು ತ್ವರಿತವಾಗಿ ಕೆಲಸ ಮಾಡಿದೇ ಇದ್ದರೆ, ಸಮಸ್ಯೆಗಳು ಹೆಚ್ಚಾಗಿ, ಇದಕ್ಕಿಂತ ಕಠಿಣ ಸಮಸ್ಯೆ ಎದುರಿಸಬೇಕಿತ್ತು. ಹೀಗಾಗಿ ನಾನು ಈ ನಿರ್ಧಾರ ಮಾಡಿದೆ‘ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಉದ್ಯೋಗ ಕಡಿತದ ಬಗ್ಗೆ ಉದ್ಯೋಗಿಗಳಿಗೆ ಇ–ಮೇಲ್‌ ಮಾಡಿದ್ದ ಅವರು, ‘ನಾನು ನಿಮ್ಮೊಂದಿಗೆ ಬೇಸರದ ಸಂಗತಿಯನ್ನು ಹಂಚಿಕೊಳ್ಳಬೇಕಿದೆ. ನಾವು ನಮ್ಮ ಸಿಬ್ಬಂದಿಯನ್ನು ಸುಮಾರು 12000 ದಷ್ಟು ಕಡಿಮೆ ಮಾಡಲು ಮುಂದಾಗಿದ್ದೇವೆ. ಇದರ ಪರಿಣಾಮ ಎದುರಿಸುವ ಅಮೆರಿಕದ ಉದ್ಯೋಗಿಗಳಿಗೆ ನಾವು ಈಗಾಗಲೇ ಮೇಲ್ ಮಾಡಿದ್ದೇವೆ. ಇತರೆ ರಾಷ್ಟ್ರಗಳಲ್ಲಿ ಅಲ್ಲಿನ ಸ್ಥಳೀಯ ಕಾನೂನಿಗನ್ವಯ ಈ ಪ್ರಕ್ರಿಯೆ ತಡವಾಗಬಹುದು‘ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು