ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

Published 18 ಏಪ್ರಿಲ್ 2024, 16:11 IST
Last Updated 18 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ವೆಚ್ಚ ಕಡಿತದ ಉದ್ದೇಶದಿಂದ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಕಂ‍ಪನಿಯು, ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.

ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ವ್ಯವಸ್ಥೆಯ ಅಳವಡಿಕೆಗೆ ಕಂಪನಿಯು ಮುಂದಾಗಿದೆ. ಹಾಗಾಗಿ, ಪ್ರಸಕ್ತ ವರ್ಷದ ಜನವರಿಯಲ್ಲಿ ಎಂಜಿನಿಯರಿಂಗ್‌, ಹಾರ್ಡ್‌ವೇರ್‌ ಹಾಗೂ ಅಸಿಸ್ಟೆಂಟ್‌ ಟೀಮ್‌ ವಿಭಾಗಗಳಲ್ಲಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿತ್ತು.

‘ಸದ್ಯ ಕಂಪನಿಯ ಎಲ್ಲ ವಿಭಾಗಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುತ್ತಿಲ್ಲ. ಫೈನಾನ್ಸ್‌, ರಿಯಲ್‌ ಎಸ್ಟೇಟ್‌ ವಿಭಾಗದಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಆದರೆ, ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ವ್ಯವಹಾರ ಸೇವೆ ಹಾಗೂ ವರಮಾನ ಮತ್ತು ನಗದು ನಿರ್ವಹಣೆ ವಿಭಾಗಗಳಲ್ಲಿಯೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

‘ಬೆಂಗಳೂರು, ಮೆಕ್ಸಿಕೊ ಮತ್ತು ಡಬ್ಲಿನ್ ನಗರದಲ್ಲಿ ಕಂಪನಿಯ ಕಾರ್ಯಾಚರಣೆ ವಿಸ್ತರಿಸಲು ನಿರ್ಧರಿಸಲಾಗಿದೆ. ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಈ ನಗರಗಳಲ್ಲಿ ಉದ್ಯೋಗಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಗೂಗಲ್‌ ಫೈನಾನ್ಸ್‌ ವಿಭಾಗದ ಮುಖ್ಯಸ್ಥ ರುತ್ ಪೊರಾಟ್ ಅವರು, ಉದ್ಯೋಗಿಗಳಿಗೆ ಇ–ಮೇಲ್‌ ಸಂದೇಶ ಕಳುಹಿಸಿದ್ದಾರೆಂದು ಅಮೆರಿಕದ ನ್ಯೂಸ್‌ ಪೋರ್ಟಲ್‌ ‘ಬ್ಯುಸಿನೆಸ್‌ ಇನ್‌ಸೈಡರ್‌’ ವರದಿ ಮಾಡಿದೆ.

‘ಕಂಪನಿಯ ಈ ನಿರ್ಧಾರವು ಅಲ್ಪ ಪ್ರಮಾಣದ ಸಿಬ್ಬಂದಿಯ ಮೇಲಷ್ಟೇ ಪರಿಣಾಮ ಬೀರಲಿದೆ. ತಂಡಗಳ ಕಾರ್ಯಾಚರಣೆಯನ್ನು ಮತ್ತಷ್ಟು ಬಲಗೊಳಿಸುವುದಕ್ಕಾಗಿ ಈ ನಿರ್ಧಾರ ಅನಿವಾರ್ಯವಾಗಿದೆ’ ಎಂದು ಪೊರಾಟ್‌ ಹೇಳಿದ್ದಾರೆ. 

.........
.........

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT