ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ, ಉದ್ದಿನ ಬೇಳೆ ದಾಸ್ತಾನಿಗೆ ಮಿತಿ

Published 2 ಜೂನ್ 2023, 22:33 IST
Last Updated 2 ಜೂನ್ 2023, 22:33 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಹಾಗೂ ರಿಟೇಲ್‌ ವ್ಯಾಪಾರಿಗಳಿಗೆ ಅನ್ವಯವಾಗುವಂತೆ ತೊಗರಿ ಮತ್ತು ಉದ್ದಿನ ಬೇಳೆಯ ದಾಸ್ತಾನಿಗೆ ಕೇಂದ್ರ ಸರ್ಕಾರವು ಅಕ್ಟೋಬರ್‌ 31ರವರೆಗೆ ಮಿತಿ ಹೇರಿದೆ. ಮಿತಿಯು ಮಿಲ್‌ಗಳಿಗೂ ಅನ್ವಯವಾಗುತ್ತದೆ.

ಈ ಧಾನ್ಯಗಳ ಅಕ್ರಮ ದಾಸ್ತಾನು ನಿಯಂತ್ರಿಸುವುದು ಹಾಗೂ ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಕೇಂದ್ರದ ಉದ್ದೇಶ. ದಾಸ್ತಾನಿಗೆ ಕಡಿವಾಣ ಹಾಕುವ ಆದೇಶವನ್ನು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೊರಡಿಸಿದೆ.

ಅಖಿಲ ಭಾರತ ಮಟ್ಟದಲ್ಲಿ ತೊಗರಿ ಬೇಳೆಯ ದರವು ಒಂದು ವರ್ಷದಲ್ಲಿ ಶೇ 19ರಷ್ಟು ಹಾಗೂ ಉದ್ದಿನ ಮೇಳೆಯ ದರವು ಶೇ 5.26ರಷ್ಟು ಹೆಚ್ಚಾಗಿದೆ. ಹೊಸ ಆದೇಶದ ಅನ್ವಯ ಸಗಟು ವರ್ತಕರು 200 ಟನ್‌ವರೆಗೆ, ರಿಟೇಲ್ ವರ್ತಕರು 5 ಟನ್‌ವರೆಗೆ, ಬೃಹತ್ ಪ್ರಮಾಣದ ರಿಟೇಲ್ ವರ್ತಕರು 200 ಟನ್‌ವರೆಗೆ ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಇರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT