ಸೀಮೆಎಣ್ಣೆಗೆ ಇಲ್ಲ ಸಬ್ಸಿಡಿ

ನವದೆಹಲಿ: ಹದಿನೈದು ದಿನಗಳಿಗೆ ಒಮ್ಮೆಯಂತೆ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರವು ಸೀಮೆಎಣ್ಣೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಇಲ್ಲವಾಗಿಸಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ಮಾರಾಟವಾಗುವ ಸೀಮೆಎಣ್ಣೆಯ ಬೆಲೆಯು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗೆ ಸಮನಾಗಿದೆ.
ಸೋಮವಾರ ಮಂಡಿಸಲಾದ ಕೇಂದ್ರ ಬಜೆಟ್ನಲ್ಲಿ ಸೀಮೆಎಣ್ಣೆಗೆ ಸಬ್ಸಿಡಿ ನೀಡುವ ಪ್ರಸ್ತಾವ ಇಲ್ಲ. 2020–21ರಲ್ಲಿ ಸೀಮೆಎಣ್ಣೆ ಸಬ್ಸಿಡಿ ಮೊತ್ತ ₹ 2,677 ಕೋಟಿ. ಪ್ರತಿ ಹದಿನೈದು ದಿನಗಳಿಗೆ 25 ಪೈಸೆ ಬೆಲೆ ಹೆಚ್ಚಿಸಿ, ಸೀಮೆಎಣ್ಣೆ ಸಬ್ಸಿಡಿ ಹೊರೆ ತಗ್ಗಿಸಿಕೊಳ್ಳಲು ಕೇಂದ್ರವು 2016ರಲ್ಲಿ ಅವಕಾಶ ನೀಡಿತ್ತು ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಬೆಲೆ ಹೆಚ್ಚಳವು ಬಹುತೇಕರ ಅರಿವಿಗೆ ಬಂದಿಲ್ಲ, ಈ ವಿಚಾರವಾಗಿ ವಿರೋಧ ಪಕ್ಷಗಳು ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.