ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಟೆಲಿಕಾಂ ಕಂಪನಿ ಸ್ವಾಧೀನದಲ್ಲಿ ಸರ್ಕಾರಕ್ಕೆ ಇಲ್ಲ ಆಸಕ್ತಿ: ವಿಐಎಲ್‌ ಸಿಇಒ

Last Updated 26 ಸೆಪ್ಟೆಂಬರ್ 2021, 14:44 IST
ಅಕ್ಷರ ಗಾತ್ರ

ನವದೆಹಲಿ: ‘ದೂರಸಂಪರ್ಕ ವಲಯದ ಯವುದೇ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಆಸಕ್ತಿಯನ್ನು ತಾನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ’ ಎಂದು ವೊಡಾಫೋನ್‌ ಐಡಿಯಾ ಲಿಮಿಟೆಡ್‌ನ (ವಿಐಎಲ್‌) ಸಿಇಒ ರವೀಂದರ್‌ ಟಕ್ಕರ್ ಹೇಳಿದ್ದಾರೆ.

‘ಸರ್ಕಾರದೊಂದಿಗೆ ವಿವಿಧ ಹಂತಗಳಲ್ಲಿ ನಾನು ಸಂವಹನ ನಡೆಸಿದ್ದೇನೆ. ಸರ್ಕಾರವು ಯಾವುದೇ ಇತರ ಟೆಲಿಕಾಂ ಕಂಪನಿಯನ್ನು ಹೊಂದಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಅಥವಾ ನಿರ್ವಹಿಸಲು ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದಿದ್ದಾರೆ.

ಟೆಲಿಕಾಂ ವಲಯದಲ್ಲಿ ಕನಿಷ್ಠ ಮೂರು ಖಾಸಗಿ ಕಂಪನಿಗಳು ಇರಬೇಕು ಎಂಬುದು ಸರ್ಕಾರದ ಬಯಕೆ ಎನ್ನುವುದು ಸ್ಪಷ್ಟವಾಗಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT