ಮತ್ತೆ ಆರ್‌ಬಿಐ ಲಾಭಕ್ಕೆ ಕೈಹಾಕಿದ ಕೇಂದ್ರ: ₹30 ಸಾವಿರ ಕೋಟಿ ಕೇಂದ್ರಕ್ಕೆ?

ನವದೆಹಲಿ: ವಿತ್ತೀಯ ಕೊರತೆ ಗುರಿ ತಲುಪಲು, ಕೇಂದ್ರ ಸರ್ಕಾರವು ಆರ್‌ಬಿಐನಿಂದ ಮಧ್ಯಂತರ ಲಾಭಾಂಶದ ರೂಪದಲ್ಲಿ ₹ 30 ಸಾವಿರ ಕೋಟಿ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವರಮಾನ ಸಂಗ್ರಹ ಇಳಿಮುಖವಾಗಿದೆ. ಆರ್ಥಿಕ ಬೆಳವಣಿಗೆ ದರವು ಮೊದಲ ತ್ರೈಮಾಸಿಕದಲ್ಲಿ ಶೇ 5ಕ್ಕೆ ಕುಸಿದಿದೆ. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಹಲವು ಸುಧಾರಣಾ ಕ್ರಮಗಳನ್ನು ಘೋಷಿಸುತ್ತಿದೆ. ಆದರೆ, ಇದಕ್ಕೆ ಅಗತ್ಯವಾದ ಬಂಡವಾಳ ಹೊಂದಿಸಿಕೊಳ್ಳುವುದು ಸಹ ಸವಾಲಾಗಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ರಲ್ಲಿ ನಿಯಂತ್ರಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಆರ್‌ಬಿಐನಿಂದ ₹ 25 ಸಾವಿರ ಕೋಟಿಯಿಂದ ₹ 30 ಸಾವಿರ ಕೋಟಿಯನ್ನು ಮಧ್ಯಂತರ ಲಾಭಾಂಶ ನೀಡುವಂತೆ ಕೇಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್‌ಬಿಐನಿಂದ ಲಾಭಾಂಶ ಪಡೆಯುವ ಮಾರ್ಗವಲ್ಲದೆ, ಕೇಂದ್ರೋದ್ಯಮಗಳ ಷೇರು ವಿಕ್ರಯ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗಳ (ಎನ್‌ಎಸ್‌ಎಸ್‌ಎಫ್) ಗರಿಷ್ಠ ಬಳಕೆಮಾಡುವ ಮೂಲಕವೂ ಬಂಡವಾಳ ಸಂಗ್ರಹಿಸಬಹುದಾಗಿದೆ.
ಹೆಚ್ಚುವರಿ ಮೀಸಲು ನಿಧಿಯಲ್ಲಿ
₹ 1.76 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ವರ್ಗಾಯಿಸಲು ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಆರ್‌ಬಿಐ ಆಡಳಿತ ಮಂಡಳಿ ಕಳೆದ ತಿಂಗಳು ಒಪ್ಪಿಗೆ ಸೂಚಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.