ಗುರುವಾರ , ಫೆಬ್ರವರಿ 27, 2020
19 °C

ಸುಲಲಿತ ಉದ್ದಿಮೆ ಆರಂಭಿಸಲು ಹೊಸ ‘ಇ–ಫಾರ್ಮ್‌’ ಪರಿಚಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉದ್ದಿಮೆ ಆರಂಭಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಕೇಂದ್ರ ಸರ್ಕಾರ ಸಮಗ್ರ ಸ್ವರೂಪದ ವಿದ್ಯುನ್ಮಾನ ಅರ್ಜಿ (ಇ–ಫಾರ್ಮ್‌) ಪರಿಚಯಿಸಿದೆ.

ಇದೇ 15 ರಿಂದ ಅಸ್ತಿತ್ವಕ್ಕೆ ಬರಲಿರುವ  ಉದ್ದಿಮೆಗಳಿಗೆ ಹೊಸ ವ್ಯವಸ್ಥೆಯಡಿ 10 ಸೇವೆಗಳನ್ನು ಏಕಕಾಲಕ್ಕೆ ಒದಗಿಸಲು ’ಇ–ಫಾರ್ಮ್‌’ನಡಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಉದ್ದಿಮೆ ಆರಂಭಿಸಲು ಸಮಯ ಮತ್ತು ವೆಚ್ಚದ ಉಳಿತಾಯವಾಗಲಿದೆ ಎಂದು ಕಂಪನಿ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಇ–ಫಾರ್ಮ್‌’ ಮೂಲಕ ಕಾರ್ಮಿಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಲ್ಲಿನ ರೆವಿನ್ಯೂ ಇಲಾಖೆಯು ಕೆಲ ಸೇವೆಗಳನ್ನು ಒದಗಿಸಲಿವೆ. ಹೊಸ ಕಂಪನಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಮತ್ತು ಉದ್ಯೋಗಿಗಳ ರಾಜ್ಯ ವಿಮೆ ನಿಗಮದಲ್ಲಿ (ಇಎಸ್‌ಐಸಿ) ನೋಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌), ಮೂಲದಲ್ಲಿಯೇ ತೆರಿಗೆ ಸಂಗ್ರಹ ಮತ್ತು ಕಡಿತ (ಟಿಎಎನ್‌) ಮತ್ತು ಬ್ಯಾಂಕ್‌ ಖಾತೆ ಆರಂಭಿಸಲು ’ಇ–ಫಾರ್ಮ್‌’ ನೆರವಾಗಲಿದೆ. ಸರಕು ಮತ್ತು ಸೇವಾ ತೆರಿಗೆ ‍ಪಾವತಿಯ ಗುರುತಿನ ಸಂಖ್ಯೆಯಾಗಿರುವ ಜಿಎಸ್‌ಟಿಎನ್‌ಗೆ ಅರ್ಜಿ ಸಲ್ಲಿಸಿದ್ದರೆ ಅದನ್ನೂ ವಿಳಂಬ ಇಲ್ಲದೆ ಹಂಚಿಕೆ ಮಾಡಲಾಗುವುದು. ಕಂಪನಿ ವ್ಯವಹಾರಗಳ ಸಚಿವಾಲಯದ ಅಂತರ್ಜಾಲ ತಾಣದಲ್ಲಿ ಹೊಸ ಅರ್ಜಿ ಭರ್ತಿ ಮಾಡಬಹುದು.

ದೇಶದಲ್ಲಿ ಸದ್ಯಕ್ಕೆ 11.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಂಪನಿಗಳಿವೆ. ಪ್ರತಿ ತಿಂಗಳೂ ಸಾವಿರಾರು ಕಂಪನಿಗಳು ಹೊಸದಾಗಿ ನೋಂದಾವಣೆಗೊಳ್ಳುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)