ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಮಾರಾಟಕ್ಕೆ ಆಸಕ್ತಿ ಇದೆ: ಟಾಟಾಗೆ ಕೇಂದ್ರದ ಪತ್ರ

Last Updated 12 ಅಕ್ಟೋಬರ್ 2021, 1:18 IST
ಅಕ್ಷರ ಗಾತ್ರ

ನವದೆಹಲಿ: ನಷ್ಟದಲ್ಲಿ ಇರುವ ಏರ್‌ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವ ಆಸಕ್ತಿ ಇದೆ ಎಂಬ ಪತ್ರವನ್ನು ಕೇಂದ್ರ ಸರ್ಕಾರವು ಟಾಟಾ ಸಮೂಹಕ್ಕೆ ನೀಡಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ್‌ ಪಾಂಡೆ ಅವರು ಸೋಮವಾರ ತಿಳಿಸಿದ್ದಾರೆ.

ಈ ಪತ್ರವನ್ನು ಟಾಟಾ ಸಮೂಹವು ಒಪ್ಪಿಕೊಂಡ ಬಳಿಕ ಷೇರು ಖರೀದಿ ಒಪ್ಪಂದಕ್ಕೆ ಸಹಿ ಆಗಲಿದೆ. ಸಾಮಾನ್ಯವಾಗಿ ಪತ್ರವನ್ನು ಸ್ವೀಕರಿಸಿದ 14 ದಿನಗಳಲ್ಲಿ, ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ. ತ್ವರಿತವಾಗಿ ಒಪ್ಪಂದ ಏರ್ಪಡುವಂತೆ ನಿರೀಕ್ಷಿಸುತ್ತೇವೆ ಎಂದು ಪಾಂಡೆ ಅವರು ತಿಳಿಸಿದ್ದಾರೆ.

₹ 2,700 ಕೋಟಿ ನಗದು ಪಾವತಿಸಿ, ₹ 15,300 ಕೋಟಿ ಮೊತ್ತದ ಸಾಲವನ್ನು ವಹಿಸಿಕೊಳ್ಳುವ ಮೂಲಕ ಏರ್‌ ಇಂಡಿಯಾ ಕಂಪನಿಯನ್ನು ತನ್ನದಾಗಿಸಿಕೊಳ್ಳುವ ಟಾಟಾ ಸಮೂಹದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಕಳೆದವಾರ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT