ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ವಿವರ 2 ವರ್ಷ ಅಳಿಸದಂತೆ ದೂರಸಂಪರ್ಕ ಸೇವಾ ಕಂಪನಿಗಳಿಗೆ ಕೇಂದ್ರ ತಾಕೀತು

Last Updated 24 ಡಿಸೆಂಬರ್ 2021, 14:17 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಸೇವಾ ಕಂಪನಿಗಳು ಚಂದಾದಾರರ ಕರೆ ವಿವರ ಮತ್ತು ಇಂಟರ್ನೆಟ್ ಬಳಕೆ ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳಬೇಕಿರುವ ಅವಧಿಯನ್ನು ಕೇಂದ್ರ ದೂರಸಂಪರ್ಕ ಇಲಾಖೆಯು ಎರಡು ವರ್ಷಗಳಿಗೆ ವಿಸ್ತರಿಸಿದೆ.‌

ಇದುವರೆಗೆ ಈ ದಾಖಲೆಗಳನ್ನು ಒಂದು ವರ್ಷ ಕಾಯ್ದಿಟ್ಟುಕೊಂಡಿದ್ದರೆ ಸಾಕಿತ್ತು. ಭದ್ರತಾ ಕಾರಣಗಳಿಂದಾಗಿ, ಎರಡು ವರ್ಷಗಳ ಅವಧಿಗೆ ಇವುಗಳನ್ನು ಕಾಯ್ದಿರಿಸಬೇಕು ಎಂದು ಇಲಾಖೆ ತಾಕೀತು ಮಾಡಿದೆ.

‘ವಾಣಿಜ್ಯ ದಾಖಲೆಗಳನ್ನು, ಕರೆ ವಿವರಗಳ ದಾಖಲೆಗಳನ್ನು, ಐಪಿ ವಿವರಗಳನ್ನು ದೂರಸಂಪರ್ಕ ಸೇವಾ ಪರವಾನಗಿ ಪಡೆದವರು ಇರಿಸಿಕೊಳ್ಳಬೇಕು. ಭದ್ರತೆಯ ಕಾರಣಗಳಿಗೆ ಪರವಾನಗಿ ಪ್ರಾಧಿಕಾರದ ಪರಿಶೀಲನೆಗೆ ಅವುಗಳನ್ನು ಎರಡು ವರ್ಷಗಳವರೆಗೆ ಇರಿಸಿಕೊಳ್ಳಬೇಕು’ ಎಂದು ಇಲಾಖೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.

ಇಲಾಖೆಯಿಂದ ನಿರ್ದಿಷ್ಟ ಸೂಚನೆ ಇಲ್ಲದಿದ್ದರೆ, ದೂರಸಂಪರ್ಕ ಕಂಪನಿಗಳು ವಿವರಗಳನ್ನು ಎರಡು ವರ್ಷಗಳ ನಂತರದಲ್ಲಿ ನಾಶಪಡಿಸಬಹುದು. ಸಾರ್ವಜನಿಕ ಹಿತಾಸಕ್ತಿ, ಭದ್ರತೆಯ ದೃಷ್ಟಿಯಿಂದ ಈ ಬದಲಾವಣೆ ಅಗತ್ಯವಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇ–ಮೇಲ್‌ನ ಲಾಗಿನ್‌ ಹಾಗೂ ಲಾಗೌಟ್‌ ವಿವರಗಳು, ವೈಫೈ ಮೂಲಕ ಮಾಡಿದ ಕರೆ ವಿವರಗಳು, ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಮಾಡಿದ ಕರೆ ವಿವರಗಳನ್ನು ಕಂಪನಿಗಳು ಇನ್ನು ಮುಂದೆ ಎರಡು ವರ್ಷಗಳವರೆಗೆ ಇರಿಸಿಕೊಳ್ಳುವುದು ಕಡ್ಡಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT