ನವದೆಹಲಿ: 2024–25ರ ಸಕ್ಕರೆ ಮಾರುಕಟ್ಟೆ ಋತುವಿನಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ದರ ಮತ್ತು ಎಥೆನಾಲ್ ಬೆಲೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಗುರುವಾರ ತಿಳಿಸಿದ್ದಾರೆ.
ಸಕ್ಕರೆ ಬೆಲೆ ಹೆಚ್ಚಳಕ್ಕೂ ಚಿಂತನೆ ನಡೆಸಿದೆ. 2019ರ ಫೆಬ್ರುವರಿಯಿಂದ ಸಕ್ಕರೆ ಕನಿಷ್ಠ ಮಾರಾಟ ಬೆಲೆಯು ಕೆ.ಜಿ ಗೆ ₹31 ಇದೆ. ಮುಂಗಾರು ಉತ್ತಮವಾಗಿದೆ. ಹಾಗಾಗಿ, ಈ ಸಕ್ಕರೆ ಋತುವಿನಲ್ಲಿ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
2022–23ರ ಮಾರುಕಟ್ಟೆ ವರ್ಷದಿಂದ ಎಥೆನಾಲ್ ಬೆಲೆಯನ್ನು ಏರಿಕೆ ಮಾಡಿಲ್ಲ. ಸದ್ಯ ಕಬ್ಬಿನ ಹಾಲಿನಿಂದ ಉತ್ಪಾದಿಸುವ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ ₹65.61, ಬಿ–ಹೆವಿ ಮತ್ತು ಸಿ–ಹೆವಿ ಮೊಲಾಸಿಸ್‌ನಿಂದ (ಕಾಕಂಬಿ) ಉತ್ಪಾದಿಸುವ ಎಥೆನಾಲ್‌ನ ದರವು ಲೀಟರ್‌ಗೆ ಕ್ರಮವಾಗಿ ₹60.73 ಮತ್ತು ₹56.28 ಇದೆ.