ನವದೆಹಲಿ: ಏರ್ ಇಂಡಿಯಾ ವಿಮಾನಯಾನ ಕಂಪನಿಯನ್ನು ₹ 18 ಸಾವಿರ ಕೋಟಿಗೆ ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರವು ಟಾಟಾ ಸನ್ಸ್ ಜೊತೆ ಷೇರು ಖರೀದಿ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದೆ ಎಂದುಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರು ಟ್ವೀಟ್ ಮಾಡಿದ್ದಾರೆ.

ಏರ್ ಇಂಡಿಯಾದ ಹಣಕಾಸು ವಿಭಾಗದ ನಿರ್ದೇಶಕ ವಿನೋದ್ ಹೆಜಮಾಡಿ, ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯೇಂದ್ರ ಮಿಶ್ರಾ ಮತ್ತು ಟಾಟಾ ಸಮೂಹದ ಸೂರ್ಯಪ್ರಕಾಶ್ ಮುಖ್ಯೋಪಾಧ್ಯಾಯ ಅವರು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

₹ 2,700 ಕೋಟಿ ನಗದು ಪಾವತಿಸಿ, ₹ 15,300 ಕೋಟಿ ಮೊತ್ತದ ಸಾಲವನ್ನು ವಹಿಸಿಕೊಳ್ಳುವ ಮೂಲಕ ಏರ್ ಇಂಡಿಯಾ ಕಂಪನಿಯನ್ನು ತನ್ನದಾಗಿಸಿಕೊಳ್ಳುವ ಟಾಟಾ ಸಮೂಹದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ.ಏರ್ ಇಂಡಿಯಾದಲ್ಲಿನ ಶೇ 100ರಷ್ಟು ಷೇರನ್ನು ಮಾರಾಟ ಮಾಡುವ ಆಸಕ್ತಿ ಇದೆ ಎಂಬ ಪತ್ರವನ್ನು ಕೇಂದ್ರ ಸರ್ಕಾರವುಅಕ್ಟೋಬರ್ 11ರಂದು ಟಾಟಾ ಸಮೂಹಕ್ಕೆ ನೀಡಿತ್ತು.

ಆಗಸ್ಟ್ 31ರ ಅಂತ್ಯದವರೆಗೆ ಏರ್ ಇಂಡಿಯಾದ ಒಟ್ಟು ಸಾಲದ ಮೊತ್ತವು ₹ 61,562 ಕೋಟಿ ಇದೆ. ಇದರಲ್ಲಿ ₹ 15,300 ಕೋಟಿ ಸಾಲವನ್ನು ಟಾಟಾ ಸನ್ಸ್ ಹೊತ್ತುಕೊಳ್ಳಲಿದೆ. ಇನ್ನುಳಿದ ₹ 46,262 ಕೋಟಿ ಮೊತ್ತವು ಏರ್ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್ಗೆ ವರ್ಗಾವಣೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.