ಗುರುವಾರ , ಫೆಬ್ರವರಿ 9, 2023
30 °C

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ: ಟೆಲಿಕಾಂ ಇಲಾಖೆ ಆದೇಶ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಟೆಲಿಕಾಂ ಕಂಪನಿಗಳು ಯಾವುದೇ ವಿಮಾನ ನಿಲ್ದಾಣಗಳ ಸುತ್ತಮುತ್ತ ಅಂದರೆ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ.

5ಜಿ ಬ್ಯಾಂಡ್‌ಗಳನ್ನು ವಿಮಾನ ನಿಲ್ದಾಣದ ಸುತ್ತಮುತ್ತ ಒದಗಿಸಿದರೆ 5ಜಿ ತರಂಗಾಂತರಗಳು ಏರ್‌ಕ್ರಾಫ್ಟ್‌ ರೆಡಿಯೊ ತರಂಗಾಂತರಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದ ವಿಮಾನ ಲ್ಯಾಂಡಿಂಗ್ ಆಗುವಾಗ ಅಪಘಾತ ಆಗುವ ಅಪಾಯ ಇರುತ್ತದೆ ಎಂದು ಇಲಾಖೆ ಹೇಳಿದೆ.

5ಜಿ ಅಳವಡಿಕೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಟೆಲಿಕಾಂ ಕಂಪನಿಗಳಾದ ರಿಲಯನ್ಸ್‌ ಜಿಯೊ, ಏರ್‌ಟೆಲ್ ಹಾಗೂ ವೋಡಾಫೋನ್ ಕಂಪನಿಗಳಿಗೆ ಟೆಲಿಕಾಂ ಇಲಾಖೆ ಆದೇಶ ಪತ್ರ ಕಳುಹಿಸಿದೆ.

ಆದರೆ, ಈಗಾಗಲೇ ಏರ್‌ಟೆಲ್, ನಾಗ್ಪುರ್, ಬೆಂಗಳೂರು, ನವದೆಹಲಿ, ಗುವಾಹಟಿ ಹಾಗೂ ಪುಣೆ ವಿಮಾನ ನಿಲ್ದಾಣಗಳಲ್ಲಿ 5ಜಿ ಸ್ಟೇಶನ್‌ಗಳನ್ನು ಅಳವಡಿಸುವ ಕಾರ್ಯಾರಂಭಿಸಿದೆ. ರಿಲಯನ್ಸ್‌ ಜಿಯೊ ದೆಹಲಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ವಿಮಾನ ನಿಲ್ದಾಣಗಳ ಸುರಕ್ಷತಾ ವಲಯದ ರೇಖಾಚಿತ್ರವನ್ನು ಒದಗಿಸಿದೆ. ಅದರಂತೆ ಟೆಲಿಕಾಂ ಕಂಪನಿಗಳು ನಡೆದುಕೊಳ್ಳಬೇಕು ಎಂದು ಟೆಲಿಕಾಂ ಇಲಾಖೆ ಪತ್ರದಲ್ಲಿ ತಿಳಿಸಿದೆ. ಏರ್‌ಕ್ರಾಫ್ಟ್‌ ರೆಡಿಯೊ ತರಂಗಾಂತರಗಳ ಬಗ್ಗೆ ಡಿಜಿಸಿಎ ಹೊಸ ನಿಯಮಗಳನ್ನು ಜಾರಿಗೊಳಿಸುವವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ.

ಈಗಾಗಲೇ ಅಮೆರಿಕ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ವೇಳೆ 5ಜಿ ಹೈಸ್ಪೀಡ್ ತರಂಗಾಂತರಗಳಿಂದ ತೊಂದರೆ ಆಗುತ್ತಿದೆ ಎಂದು ಪೈಲಟ್‌ಗಳು ದೂರಿರುವ ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಭಾರತದಲ್ಲಿ 5ಜಿ ಸೇವೆಗೆ ಚಾಲನೆ ದೊರೆತಿದ್ದು ಆರಂಭಿಕ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು