ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾಬುಲ್ಸ್‌ ಎಂಎಫ್‌ ಸ್ವಾಧೀನಕ್ಕೆ ಗ್ರೋವ್‌ ಸಿದ್ಧತೆ

Last Updated 11 ಮೇ 2021, 14:50 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯಾ ಬುಲ್ಸ್‌ ಮ್ಯೂಚುವಲ್‌ ಫಂಡ್‌ ಕಂಪನಿಯುನ್ನು ಒಟ್ಟಾರೆ ₹ 175 ಕೋಟಿ ಮೊತ್ತಕ್ಕೆ ಸ್ವಾಧೀನ ಮಾಡಿಕೊಳ್ಳುವುದಾಗಿ ಆನ್‌ಲೈನ್‌ ಹೂಡಿಕೆ ಕಂಪನಿ ‘ಗ್ರೋವ್‌’ ಮಂಗಳವಾರ ತಿಳಿಸಿದೆ.

ಇಂಡಿಯಾ ಬುಲ್ಸ್‌ ಆಸ್ತಿ ನಿರ್ವಹಣಾ ಕಂಪನಿ (ಐಬಿಎಎಂಸಿ) ಮತ್ತು ಟ್ರಸ್ಟಿ ಕಂಪನಿಯನ್ನು ಖರೀದಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹಣಕಾಸು ವಲಯದ ತಂತ್ರಜ್ಞಾನ ಕಂಪನಿಗಳಿಗೆ ಮ್ಯೂಚುವಲ್ ಫಂಡ್‌ ವಹಿವಾಟು ನಡೆಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಒಪ್ಪಿಗೆ ನೀಡಿದ ಒಂದು ತಿಂಗಳ ಬಳಿಕ ಈ ಸ್ವಾಧೀನದ ನಿರ್ಧಾರ ಹೊರಬಿದ್ದಿದೆ. ಗ್ರೋವ್ ಸಂಸ್ಥೆಯು, ಆಸ್ತಿ ನಿರ್ವಹಣಾ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಮೊದಲ ಹಣಕಾಸು ತಂತ್ರಜ್ಞಾನ ಕಂಪನಿ ಆಗಲಿದೆ.

ಇಂಡಿಯಾಬುಲ್ಸ್‌ ಮ್ಯೂಚುವಲ್‌ ಫಂಡ್‌ ಬಳಿ 13 ಫಂಡ್‌ಗಳಿವೆ. ತ್ರೈಮಾಸಿಕದ ಸರಾಸರಿ ಆಸ್ತಿ ನಿರ್ವಹಣಾ ಮೊತ್ತವು 2021ರ ಡಿಸೆಂಬರ್‌ನಲ್ಲಿ ₹ 921.33 ಕೋಟಿಗಳಷ್ಟಿತ್ತು. ಇದು 2021ರ ಮಾರ್ಚ್‌ ಅಂತ್ಯಕ್ಕೆ₹ 663.68 ಕೋಟಿಗೆ ಇಳಿಕೆ ಕಂಡಿದೆ.

ಮ್ಯೂಚುವಲ್‌ ಫಂಡ್ ವಹಿವಾಟನ್ನು ಮಾರಾಟ ಮಾಡುವುದರಿಂದ ಮಾತೃಸಂಸ್ಥೆ ಆಗಿರುವ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ನ ಬಂಡವಾಳ ಸ್ಥಿತಿ ಸುಧಾರಿಸಲಿದೆ.

ಮ್ಯೂಚುವಲ್ ಫಂಡ್‌, ಷೇರುಪೇಟೆ ಮತ್ತು ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಹೂಡಿಕೆ ಮಾಡಲು ಡಿಜಿಟಲ್‌ ವೇದಿಕೆಯನ್ನು ಬಳಸುವ 1.5 ಕೋಟಿಗೂ ಅಧಿಕ ಗ್ರಾಹಕರನ್ನು ಗ್ರೋವ್ ಸಂಸ್ಥೆ ಹೊಂದಿದೆ. ಈಕ್ವಿಟಿ ಹೂಡಿಕೆಗಳಲ್ಲಿ ಸಣ್ಣ ಹೂಡಿಕೆದಾರರ ಪಾಲುದಾರಿಕೆಯನ್ನು ಹೆಚ್ಚಿಸುವುದಾಗಿ ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT