ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 54ನೇ ಸಭೆ ನಡೆಯಲಿದೆ.
ಜಿಎಸ್‌ಟಿ ಅಡಿ ರಚಿಸಿರುವ ನಾಲ್ಕು ಸ್ಲ್ಯಾಬ್‌ಗಳನ್ನು ಪರಿಷ್ಕರಿಸುವಂತೆ ನಾಗರಿಕರು ಮತ್ತು ವರ್ತಕರು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈ ತೆರಿಗೆ ಪ್ರಮಾಣ ಸರಳಗೊಳಿಸುವ ಸಂಬಂಧ ಪರಿಶೀಲನೆ ನಡೆಸಲು ಏಳು ಸಚಿವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಇದರ ಸಂಚಾಲಕರಾಗಿದ್ದಾರೆ. ದರ ಸರಳೀಕರಣ ಹಾಗೂ ಯಾವ ವಿಭಾಗಗಳಿಗೆ ವಿನಾಯಿತಿ ಸೌಲಭ್ಯ ನೀಡಬೇಕು ಎಂಬ ಬಗ್ಗೆ ಸಮಿತಿಯು ಸಭೆಯಲ್ಲಿ ವರದಿ ಮಂಡಿಸುವ ನಿರೀಕ್ಷೆಯಿದೆ. ಜಿಎಸ್‌ಟಿ ವರಮಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿಯು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ.
ಸಮಿತಿಯು ಕರಡು ವರದಿ ಮಂಡಿಸಿದರೂ ಅದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜೂನ್ 23ರಂದು ನಡೆದ ಮಂಡಳಿಯ ಸಭೆಯಲ್ಲಿ ಸಚಿವೆ ನಿರ್ಮಲಾ ಹೇಳಿದ್ದರು.