ಮೈಸೂರು: ದಿವೇಶ್ ಶರ್ಮ ಹ್ಯಾಟ್ರಿಕ್ ಬೌಲಿಂಗ್ ದಾಳಿಗೆ (42ಕ್ಕೆ 3) ನಲುಗಿದ ಕೆಎಸ್ಸಿಎ ಕೋಲ್ಟ್ಸ್ ತಂಡವು ಗುರುವಾರ ಇಲ್ಲಿ ಆರಂಭಗೊಂಡ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಎದುರು 140 ರನ್ಗಳ ಅಲ್ಪಮೊತ್ತಕ್ಕೆ ಕುಸಿಯಿತು. ದಿನದಾಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ 1 ವಿಕೆಟ್ಗೆ 134 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ಇಲ್ಲಿನ ಎಸ್ಜೆಸಿಇ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಟ್ಸ್ ಆರಂಭದಿಂದಲೂ ತಿಣುಕಾಡಿತು. ಪಂದ್ಯದ 38ನೇ ಓವರ್ನಲ್ಲಿ ಹಿಮಾಚಲ ವೇಗಿ ದಿವೇಶ್ ಶರ್ಮ ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಕೋಲ್ಟ್ಸ್ ನಾಯಕ ಅನೀಶ್ವರ್ ಗೌತಮ್ (33) ಮೂರನೇ ಎಸೆತದಲ್ಲಿ ಬೌಲ್ಡ್ ಆದರೆ, ಮರು ಎಸೆತದಲ್ಲಿ ಮೊಹ್ಸಿನ್ ಖಾನ್ (0) ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ನಂತರದ ಎಸೆತದಲ್ಲಿ ಶಿಖರ್ ಶೆಟ್ಟಿ (0) ಕ್ಯಾಚಿತ್ತು ನಿರ್ಗಮಿಸಿದರು.

ಹಿಮಾಚಲ ಪ್ರದೇಶ ತಂಡದ ಪರ ವಿಪಿನ್ ಶರ್ಮ ಹಾಗೂ ಅರ್ಪಿತ್ ಗುಲೇರಿಯ 3 ವಿಕೆಟ್ ಪಡೆದರು.

ಇನಿಂಗ್ಸ್ ಆರಂಭಿಸಿದ ಹಿಮಾಚಲ ಪ್ರದೇಶ ಪರ ಅಂಕುಶ್ ಬೈನ್ಸ್ ಹಾಗೂ ಸಿದ್ಧಾಂತ್ ಪುರೋಹಿತ್ ಎರಡನೇ ವಿಕೆಟ್ಗೆ 128 ರನ್ಗಳ ಅಜೇಯ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಸಂಕ್ಷಿಪ್ತ ಸ್ಕೋರ್:
ಎಸ್ಜೆಸಿಇ ಕ್ರೀಡಾಂಗಣ: ಕೆಎಸ್ಸಿಎ ಕೋಲ್ಟ್ಟ್: 41 ಓವರ್ಗಳಲ್ಲಿ 140 ( ಅನೀಶ್ವರ್ ಗೌತಮ್ 33, ಮೊನಿಷ್ ರೆಡ್ಡಿ 23, ಕೆ.ಪಿ. ಕಾರ್ತಿಕೇಯ 17, ಎನ್, ಸಮರ್ಥ್ 17. ಅರ್ಪಿತ್ ಗುಲೇರಿಯ 21ಕ್ಕೆ 3, ದಿವೇಶ್ ಶರ್ಮ 42ಕ್ಕೆ 3, ವಿಪಿನ್ ಶರ್ಮ 54ಕ್ಕೆ 3). ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 39 ಓವರ್ಗಳಲ್ಲಿ 1 ವಿಕೆಟ್ಗೆ 134 ( ಅಂಕುಶ್ ಬೈನ್ಸ್ ಔಟಾಗದೇ 76, ಸಿದ್ಧಾಂತ್ ಪುರೋಹಿತ್ ಔಟಾಗದೇ 52. ಎನ್. ಸಮರ್ಥ್ 37ಕ್ಕೆ 1)

ಎಸ್ಡಿಎನ್ಆರ್ಡಬ್ಲ್ಯು ಕ್ರೀಡಾಂಗಣ: ಆಂಧ್ರ ಕ್ರಿಕೆಟ್ ಸಂಸ್ಥೆ: 83.5 ಓವರ್ಗಳಲ್ಲಿ 257 ( ರೇವಂತ್ ರೆಡ್ಡಿ 101, ಯಾರ ಸಂದೀಪ್ 64. ನಿನಾದ್ ರಥ್ವ 92ಕ್ಕೆ 5. ಅತೀತ್ ಶೇಟ್ 49ಕ್ಕೆ 3). ಬರೋಡ ಕ್ರಿಕೆಟ್ ಸಂಸ್ಥೆ: 6 ಓವರ್ಗಳಲ್ಲಿ 1 ವಿಕೆಟ್ಗೆ 20 (ಜೋತ್ನ್ಸಿಲ್ ಸಿಂಗ್ ಔಟಾಗದೇ 16. ಸಾಕೇತ್ ರಾಮ್ 13ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.