ರಾಜಗೀರ್: ದೃಢಸಂಕಲ್ಪದಿಂದ ಆಡಿದ ಭಾರತ ತಂಡ, ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಗುರುವಾರ ಸೊಗಸಾದ ಪ್ರದರ್ಶನ ನೀಡಿ ಮಲೇಷ್ಯಾ ತಂಡವನ್ನು 4–1 ಗೋಲುಗಳಿಂದ ಸೋಲಿಸಿತು.

ಈ ಗೆಲುವಿನಿಂದ ಭಾರತ ತಂಡ ಸೂಪರ್ ಫೋರ್ ಹಂತದ 2 ಪಂದ್ಯಗಳಿಂದ 4 ಪಾಯಿಂಟ್ಸ್ ಪಡೆದು ಅಗ್ರಸ್ಥಾನಕ್ಕೇರಿತು. ಚೀನಾ ಮತ್ತು ಮಲೇಷ್ಯಾ ತಲಾ ಮೂರು ಅಂಕ ಪಡೆದಿವೆ. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ಒಂದು ಪಾಯಿಂಟ್ ಪಡೆದಿದ್ದು ಕೊನೆಯ ಸ್ಥಾನದಲ್ಲಿದೆ.

ಮನ್ಪ್ರೀತ್ ಸಿಂಗ್ (17ನೇ ನಿಮಿಷ), ಸುಖಜೀತ್ ಸಿಂಗ್ (19ನೇ ನಿಮಿಷ), ಶಿಲಾನಂದ ಲಾಕ್ರಾ (24ನೇ ನಿಮಿಷ) ಮತ್ತು ವಿವೇಕ್ ಸಾಗರ ಪ್ರಸಾದ್ (38ನೇ ನಿಮಿಷ) ಅವರು ಆತಿಥೇಯ ತಂಡದ ಪರ ಗೋಲುಗಳನ್ನು ಗಳಿಸಿದರು.

ಎರಡನೇ ನಿಮಿಷವೇ ಶಫೀಕ್ ಹಸನ್ ಗೋಲು ಹೊಡೆದು ಬಾಂಗ್ಲಾ ತಂಡಕ್ಕೆ ಮುನ್ನಡೆ ಒದಗಿಸಿದರು. ಈ ಆಘಾತದಿಂದ ಕ್ರಮೇಣ ಚೇತರಿಸಿಕೊಂಡ ಭಾರತ ಲಯ ಕಂಡುಕೊಂಡ ಮೇಲೆ ಮೊದಲಾರ್ಧದಲ್ಲೇ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ಮುನ್ನಡೆ ಸಂಪಾದಿಸಿತು. ಲಾಕ್ರಾ ಗಳಿಸಿದ ಗೋಲಿನಿಂದ ವಿರಾಮದ ವೇಳೆಗೆ ಭಾರತ 3–1 ಮುನ್ನಡೆ ಪಡೆಯಿತು.

ವಿರಾಮದ ನಂತರ ಭಾರತ ಎದುರಾಳಿಗಳ ಮೇಲೆ ಒತ್ತಡ ತೀವ್ರಗೊಳಿಸಿತು. 38ನೇ ನಿಮಿಷ ಪೆನಾಲ್ಟಿ ಕಾರ್ನರ್ನಲ್ಲಿ ವಿವೇಕ ಸಾಗರ್ ಗಳಿಸಿದ ಗೋಲಿನಿಂದ ಭಾರತದ ಗೆಲುವಿನ ಅಂತರ ಇನ್ನಷ್ಟು ಹಿಗ್ಗಿತು.

ಭಾರತ ಬುಧವಾರ ನಡೆದ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು ಹಿನ್ನಡೆಯಿಂದ ಚೇತರಿಸಿ 2–2 ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿತ್ತು. ಆತಿಥೇಯ ತಂಡವು, ಶನಿವಾರ ನಡೆಯುವ ತನ್ನ ಕೊನೆಯ ಸೂಪರ್ ಫೋರ್ ಪಂದ್ಯದಲ್ಲಿ ಚೀನಾ ತಂಡವನ್ನು ಎದುರಿಸಲಿದೆ.

ಬಾಂಗ್ಲಾದೇಶಕ್ಕೆ ಜಯ: ಬಾಂಗ್ಲಾದೇಶ ತಂಡವು ಐದು ಮತ್ತು ಆರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ 5–1 ಗೋಲುಗಳಿಂದ ಕಜಾಕಸ್ತಾನ ತಂಡವನ್ನು ಮಣಿಸಿತು.

ಕೊರಿಯಾಕ್ಕೆ ಆಘಾತ ನೀಡಿದ ಚೀನಾ

ಚೀನಾ ತಂಡ ದಿನದ ಮೊದಲ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಶಿಸ್ತುಬದ್ಧ ಆಟವಾಡಿ ಐದು ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾ ತಂಡಕ್ಕೆ 3–0 ಗೋಲುಗಳಿಂದ ಆಘಾತ ನೀಡಿತು.

ಚೀನಾ ಪರ ಬೆನ್ಹೈ ಚೆಂಗ್ (13, 43ನೇ ನಿಮಿಷ), ಜೀಶೆಂಗ್ ಗಾವೊ (43ನೇ ನಿಮಿಷ) ಗೋಲು ಗಳಿಸಿದರು.

ಇದು ಚೀನಾಕ್ಕೆ ಮೊದಲ ಜಯ. ಬುಧವಾರ ನಡೆದ ಪಂದ್ಯದಲ್ಲಿ ಮಲೇಷ್ಯಾಕ್ಕೆ ಮಣಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.