ಬುಧವಾರ, ನವೆಂಬರ್ 13, 2019
28 °C

20ಕ್ಕೆ ಜಿಎಸ್‌ಟಿ ಮಂಡಳಿ ಸಭೆ

Published:
Updated:

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಮಹತ್ವದ ಸಭೆಯು ಇದೇ 20ರಂದು ಗೋವಾದಲ್ಲಿ ನಡೆಯಲಿದೆ.

ಆರ್ಥಿಕತೆಯಲ್ಲಿನ ಹಿಂಜರಿತಕ್ಕೆ ಕಡಿವಾಣ ಹಾಕಲು ತೆರಿಗೆ ದರ ತಗ್ಗಿಸಬೇಕು ಎನ್ನುವ ಹಕ್ಕೊತ್ತಾಯ ವಿವಿಧ ವಲಯಗಳಿಂದ ಜೋರಾಗಿ ಕೇಳಿ ಬರುತ್ತಿದೆ. ಕಾರ್‌, ಬಿಸ್ಕಿಟ್‌ ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಜಿಎಸ್‌ಟಿ  ತಗ್ಗಿಸುವ ಬೇಡಿಕೆಯನ್ನು ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ತೆರಿಗೆ ಕಡಿತದ ನಿರ್ಧಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನ ತಗ್ಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)