ನವದೆಹಲಿ: ಜಿಎಸ್ಟಿ ದರ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗುವುದನ್ನು ತಾವು ಖುದ್ದಾಗಿ ಮೇಲ್ವಿಚಾರಣೆ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ದರ ಇಳಿಕೆಯ ವಿಚಾರವಾಗಿ ಕಂಪನಿಗಳು ಧನಾತ್ಮಕ ಪ್ರತಿಕ್ರಿಯೆ ನೀಡಿವೆ ಎಂದೂ ಅವರು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ನಿರ್ಮಲಾ ಅವರು, ದರ ಇಳಿಕೆಯು ಪ್ರತಿ ಕುಟುಂಬಕ್ಕೂ ಪ್ರಯೋಜನಕಾರಿ, ಇದು ಬೇಡಿಕೆಯನ್ನು ಹೆಚ್ಚಿಸುವಂಥದ್ದು ಹಾಗೂ ಅರ್ಥವ್ಯವಸ್ಥೆಗೆ ಬಲ ನೀಡುವಂಥದ್ದು ಎಂದು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ನಿರ್ಮಲಾ ಅವರು, ‘ತೆರಿಗೆ ಇಳಿಕೆಯ ತೀರ್ಮಾನ ಪ್ರಕಟವಾದ ಕೆಲವೇ ದಿನಗಳಲ್ಲಿ ಕಾರು ತಯಾರಿಕಾ ಕಂಪನಿಗಳು, ವಿಮಾ ಕಂಪನಿಗಳು, ಪಾದರಕ್ಷೆ ಹಾಗೂ ಸಿದ್ಧ ಉಡುಪುಗಳ ತಯಾರಕರು ಬೆಲೆ ಇಳಿಕೆಯ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇತರರೂ ಇದೇ ಹಾದಿ ತುಳಿಯವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

‘ಈ ಸುಧಾರಣೆಯು ದೇಶದ ಎಲ್ಲ 140 ಕೋಟಿ ಜನರ ಬದುಕಿನ ಮೇಲೆ ಪರಿಣಾಮ ಉಂಟುಮಾಡುತ್ತದೆ’ ಎಂದು ನಿರ್ಮಲಾ ಹೇಳಿದ್ದಾರೆ. ಜನಸಾಮಾನ್ಯರನ್ನು ಗಮನದಲ್ಲಿ ಇರಿಸಿಕೊಂಡು ಸುಧಾರಣೆಗಳನ್ನು ತರಲಾಗಿದೆ ಎಂದಿದ್ದಾರೆ.

ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್ನಲ್ಲಿ ನಿರ್ಮಲಾ ಅವರು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ, ಜನರ ಕೈಯಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿದರು. ಈಗ ಜಿಎಸ್ಟಿ ದರ ಇಳಿಕೆಯ ಮೂಲಕ ಉತ್ಪನ್ನಗಳ ಬೆಲೆ ತಗ್ಗುವಂತೆ ಮಾಡಲಾಗಿದೆ.

ಜಿಎಸ್ಟಿ ದರ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಲಭ್ಯವಾಗುವುದನ್ನು ಖಾತರಿಪಡಿಸುವ ಕುರಿತ ಪ್ರಶ್ನೆಗೆ ನಿರ್ಮಲಾ ಅವರು, ‘ನಮ್ಮ ಸಚಿವಾಲಯವು ಉದ್ಯಮಗಳು ಮತ್ತು ವರ್ತಕ ವಲಯದ ಜೊತೆ ಮಾತುಕತೆ ನಡೆಸುತ್ತಿದೆ. ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಎಲ್ಲರೂ ಹೇಳಿದ್ದಾರೆ... ಎಲ್ಲರೂ ಅದನ್ನು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ.

‘ಸೆಪ್ಟೆಂಬರ್ 22ರಿಂದ ನನ್ನ ಕೆಲಸದಲ್ಲಿ ಆದ್ಯತೆ ಪಡೆದುಕೊಳ್ಳುವ ಸಂಗತಿಯು, ದರ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು. ಎಲ್ಲೆಲ್ಲಿ ಇದು ಗ್ರಾಹಕರಿಗೆ ವರ್ಗಾವಣೆ ಆಗಿಲ್ಲವೋ ಅಲ್ಲಿ ನಾನು ಉದ್ದಿಮೆಗಳ ಜೊತೆ ಮಾತುಕತೆ ನಡೆಸಿ, ಪ್ರಯೋಜನವನ್ನು ಗ್ರಾಹಕರಿಗೆ ದಾಟಿಸಬೇಕು ಎಂಬುದನ್ನು ಹೇಳುತ್ತೇನೆ’ ಎಂದಿದ್ದಾರೆ.

‘ಉತ್ತಮ ವಿಪಕ್ಷ ನಾಯಕರ ಅಗತ್ಯವಿದೆ’

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸರಳೀಕರಣ ನಿರ್ಧಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವೆ ನಿರ್ಮಲಾ ಸೀತಾರಾಮನ್, ‘ಭಾರತಕ್ಕೆ ಉತ್ತಮ ವಿಪಕ್ಷ ನಾಯಕರ ಅಗತ್ಯವಿದೆ’ ಎಂದಿದ್ದಾರೆ.

‘ಭಾರತವು ಒಳ್ಳೆಯ ವಿಪಕ್ಷವನ್ನು ಹೊಂದಲು ಅರ್ಹವಾಗಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಭಾರತಕ್ಕೆ ಉತ್ತಮ ವಿರೋಧ ಪಕ್ಷದ ನಾಯಕರ ಅಗತ್ಯವಿದೆ. ಇಂತಹ ಅಪ್ರಬುದ್ಧ ಹೇಳಿಕೆಗಳು ಯಾವುದೇ ಪ್ರಯೋಜನ ನೀಡದು’ ಎಂದು ಟೀಕಿಸಿದ್ದಾರೆ.

ಜಿಎಸ್ಟಿ ಸರಳೀಕರಣ ನಿರ್ಧಾರವನ್ನು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಸಂಸ್ಥೆಯಾಗಿರುವ ಜಿಎಸ್ಟಿ ಮಂಡಳಿಯ ಶಕ್ತಿಗುಂದಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದರು.

‘ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆಗಳ ಕುರಿತು ದೇಶದ ಪ್ರಧಾನಿಯಾಗಿ ಮೋದಿ ಅವರು ಹೇಳಿಕೆ ನೀಡಿರುವುದರಲ್ಲಿ ತಪ್ಪೇನಿದೆ’ ಎಂದು ನಿರ್ಮಲಾ ಪ್ರಶ್ನಿಸಿದರು. ‘2017ರಲ್ಲಿ ಜಿಎಸ್ಟಿ ಜಾರಿಗೆ ಬಂದಾಗ ನಾಲ್ಕು ತೆರಿಗೆ ಹಂತಗಳನ್ನು ನಿಗದಿಪಡಿಸಿದ್ದಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

‘ಜಿಎಸ್ಟಿ ಜಾರಿಯಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳು ಕೂಡಾ ಪ್ರಮುಖ ಪಾತ್ರ ವಹಿಸಿದ್ದವು. ಕಾಂಗ್ರೆಸ್ನವರಿಗೆ ಜಿಎಸ್ಟಿ ಇತಿಹಾಸದ ಬಗ್ಗೆ ತಿಳಿವಳಿಕೆಯಿಲ್ಲದಿದ್ದರೆ, ಮೌನವಾಗಿರುವುದು ಒಳಿತು’ ಎಂದರು.

‘ಜಿಎಸ್ಟಿ ಜಾರಿ ಸಂದರ್ಭದಲ್ಲಿ ನಾಲ್ಕು ತೆರಿಗೆ ಹಂತಗಳು ಇರಬೇಕೆಂಬ ತೀರ್ಮಾನವನ್ನು ವಿವಿಧ ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಯು ತೆಗೆದುಕೊಂಡಿತ್ತು. ಬಿಜೆಪಿ ಅಥವಾ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ತೆಗೆದುಕೊಂಡ ನಿರ್ಧಾರ ಆಗಿರಲಿಲ್ಲ’ ಎಂಬುದನ್ನು ನೆನಪಿಸಿದರು.

ಆರ್ಥಿಕತೆಗೆ ಉತ್ತೇಜನ: ವೈಷ್ಣವ್

ಜಿಎಸ್ಟಿ ಸರಳೀಕರಣವು ಸಾಮಾನ್ಯ ಜನರಿಗೆ ಪ್ರಯೋಜನ ಉಂಟುಮಾಡುವುದರ ಜತೆಯಲ್ಲೇ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಪ್ರತಿಪಾದಿಸಿದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಜನರ ಮೇಲೆ ‘ಭಾರಿ ತೆರಿಗೆಯ ಹೊರೆ’ ಇತ್ತು ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.