ಜಿಎಸ್‌ಟಿ: ₹ 3,675 ಕೋಟಿ ಶಂಕಾಸ್ಪದ ವಹಿವಾಟು ಪತ್ತೆ

7

ಜಿಎಸ್‌ಟಿ: ₹ 3,675 ಕೋಟಿ ಶಂಕಾಸ್ಪದ ವಹಿವಾಟು ಪತ್ತೆ

Published:
Updated:

ಬೆಂಗಳೂರು: ವಾಣಿಜ್ಯ ತೆರಿಗೆ (ಜಾರಿ) ಇಲಾಖೆಯ ದಕ್ಷಿಣ ವಲಯದ ಅಧಿಕಾರಿಗಳು ಕರ್ನಾಟಕ ಮತ್ತು ತಮಿಳುನಾಡಿನ ಐದು ಸ್ಥಳಗಳಲ್ಲಿ ದಾಳಿ ನಡೆಸಿ ₹ 660 ಕೋಟಿ ಜಿಎಸ್‌ಟಿ ಒಳಗೊಂಡಿರುವ ₹ 3,675 ಕೋಟಿ ಮೊತ್ತದ ಶಂಕಾಸ್ಪದ ವಹಿವಾಟು ಪತ್ತೆಹಚ್ಚಿದ್ದಾರೆ.

ತಮಿಳುನಾಡು ತೆರಿಗೆ ಅಧಿಕಾರಿಗಳ ಸಹಯೋಗದಲ್ಲಿ ಈ ಅನುಮಾನಾಸ್ಪದ ವಹಿವಾಟು ಪತ್ತೆ ಹಚ್ಚಲಾಗಿದೆ.

ಏಳು ಮಂದಿ ಸೇರಿ 9 ಸಂಸ್ಥೆಗಳನ್ನು ಸ್ಥಾಪಿಸಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜಿಎಸ್‌ಟಿಯಡಿ ನೋಂದಾಯಿಸಿ ಅಂತರರಾಜ್ಯ ಸರ್ಕ್ಯೂಲರ್‌ ಬಿಲ್‌ ಟ್ರೇಡಿಂಗ್ ನಡೆಸುತ್ತಿದ್ದರು. ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ತಪಾಸಣೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯಾಯೋಚಿತವಲ್ಲದ ರೀತಿಯಲ್ಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ (ಐಟಿಸಿ) ಪ್ರಯೋಜನ ಪಡೆಯುವ ಉದ್ದೇಶದಿಂದ ಇವರು ತಮ್ಮೊಳಗೆ ಸರ್ಕ್ಯೂಲರ್‌ ಬಿಲ್‌ ಟ್ರೇಡಿಂಗ್ ನಡೆಸುತ್ತಿದ್ದರು. ಬ್ಯಾಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆಯಲು ಮಾರಾಟ ಮತ್ತು ಸರಕಿನ ಸಂಗ್ರಹದ ಬಗ್ಗೆ ಉತ್ಪ್ರೇಕ್ಷಿತ ದಾಖಲೆಗಳನ್ನು ಸೃಷ್ಟಿಸಿದ್ದರು. ಮೆಸರ್ಸ್‌ ಸಿಂಘಿ ಬಿಲ್ಡ್‌ ಟೆಕ್‌ ಮತ್ತು ಸ್ಟೀಲ್‌ ಹೈಪರ್‌ ಮಾರ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವಿವಿಧ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿಗಳ ಸಾಲ ಪಡೆದಿರುವುದು ಪತ್ತೆಯಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !