ನವದೆಹಲಿ / ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳ ಸಾಲ ನೀಡಿಕೆ ಹಾಗೂ ಠೇವಣಿ ಪ್ರಮಾಣ ಹೆಚ್ಚಳವಾಗಿದೆ.

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ, ಎಚ್ಡಿಎಫ್ಸಿ ಬ್ಯಾಂಕ್ನ ಸಾಲ ನೀಡಿಕೆ ಪ್ರಮಾಣದಲ್ಲಿ ಶೇ 9ರಷ್ಟು ಹೆಚ್ಚಳವಾಗಿದ್ದು, ₹27.9 ಲಕ್ಷ ಕೋಟಿ ಸಾಲ ನೀಡಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹25.6 ಲಕ್ಷ ಕೋಟಿ ಸಾಲ ನೀಡಲಾಗಿತ್ತು ಎಂದು ಬ್ಯಾಂಕ್ ಷೇರುಪೇಟೆಗೆ ಶನಿವಾರ ತಿಳಿಸಿದೆ.

ಬ್ಯಾಂಕ್ನ ಠೇವಣಿ ಪ್ರಮಾಣ ಅಂದಾಜು ₹27.1 ಲಕ್ಷ ಕೋಟಿಯಾಗಿದ್ದು, ಶೇ 15ರಷ್ಟು ಹೆಚ್ಚಳವಾಗಿದೆ. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹23.5 ಲಕ್ಷ ಕೋಟಿ ಠೇವಣಿ ಆಗಿತ್ತು.

ಬ್ಯಾಂಕ್ನ ಸರಾಸರಿ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್ಎ) ಠೇವಣಿ ₹8.7 ಲಕ್ಷ ಕೋಟಿಯಾಗಿದ್ದು, ಶೇ 8.5ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಕೋಟಕ್ ಬ್ಯಾಂಕ್: ಕೋಟಕ್ ಮಹೀಂದ್ರ ಬ್ಯಾಂಕ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹4.62 ಲಕ್ಷ ಕೋಟಿ ಸಾಲ ನೀಡಿದೆ.

ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹3.99 ಲಕ್ಷ ಕೋಟಿ ಸಾಲ ನೀಡಿತ್ತು. ಇದಕ್ಕೆ ಹೋಲಿಸಿದರೆ ಸಾಲ ನೀಡಿಕೆ ಪ್ರಮಾಣ ಶೇ 15.8ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಠೇವಣಿ ಪ್ರಮಾಣ ಶೇ 14.6ರಷ್ಟು ಏರಿಕೆಯಾಗಿದ್ದು, ₹5.28 ಲಕ್ಷ ಕೋಟಿಯಾಗಿದೆ. ಕಳೆದ ಬಾರಿ ಠೇವಣಿ ₹4.61 ಲಕ್ಷ ಕೋಟಿಯಷ್ಟಾಗಿತ್ತು ಎಂದು ತಿಳಿಸಿದೆ.

ಯುಕೊ ಬ್ಯಾಂಕ್ ವಹಿವಾಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ಯುಕೊ ಬ್ಯಾಂಕ್ನ ಒಟ್ಟು ವಹಿವಾಟು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 13ರಷ್ಟು ಹೆಚ್ಚಳವಾಗಿದ್ದು ₹5.37 ಲಕ್ಷ ಕೋಟಿ ವಹಿವಾಟು ನಡೆದಿದೆ. ಬ್ಯಾಂಕ್ ₹2.31 ಲಕ್ಷ ಕೋಟಿ ಸಾಲ ನೀಡಿದ್ದು ಕಳೆದ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 16ರಷ್ಟು ಹೆಚ್ಚಳವಾಗಿದೆ. ಠೇವಣಿ ಪ್ರಮಾಣ ಶೇ 10ರಷ್ಟು ಏರಿಕೆಯಾಗಿದ್ದು ₹3.06 ಲಕ್ಷ ಕೋಟಿಯಾಗಿದೆ. ದೇಶೀಯವಾಗಿ ಸಾಲ ನೀಡಿಕೆ ಪ್ರಮಾಣ ಶೇ 17ರಷ್ಟು ಹೆಚ್ಚಳವಾಗಿದ್ದು ₹2.04 ಲಕ್ಷ ಕೋಟಿಯಷ್ಟಾಗಿದ್ದು ಠೇವಣಿ ಪ್ರಮಾಣ ₹2.90 ಲಕ್ಷ ಕೋಟಿಯಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದ ತಾತ್ಕಾಲಿಕ ಅಂಕಿ ಅಂಶಗಳು ಬ್ಯಾಂಕ್ನ ಲೆಕ್ಕಪರಿಶೋಧಕರ ಪರಿಶೀಲನೆಗೆ ಒಳಪಟ್ಟಿರುತ್ತವೆ ಎಂದು ಬ್ಯಾಂಕ್ ತಿಳಿಸಿದೆ. ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕ್ನ ಸಾಲ ನೀಡಿಕೆ ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದ್ದು ₹2.3 ಲಕ್ಷ ಕೋಟಿ ಸಾಲ ನೀಡಿದೆ. ಠೇವಣಿಯಲ್ಲಿ ಶೇ 9ರಷ್ಟು ಹೆಚ್ಚಳವಾಗಿದ್ದು ₹3.03 ಲಕ್ಷ ಕೋಟಿ ಆಗಿದೆ. ಬ್ಯಾಂಕ್ನ ಒಟ್ಟು ವ್ಯವಹಾರ ಶೇ 12ರಷ್ಟು ಏರಿಕೆಯಾಗಿದ್ದು ₹5.33 ಲಕ್ಷ ಕೋಟಿಯಾಗಿದೆ. ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ ಠೇವಣಿಯು ಶೇ 4ರಷ್ಟು ಹೆಚ್ಚಳವಾಗಿದ್ದು ₹1.39 ಲಕ್ಷ ಕೋಟಿಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.