ಭಾನುವಾರ, ಮೇ 22, 2022
21 °C

ಹುಂಡೈನಿಂದ ನೀರು ಉಳಿತಾಯದ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಕಂಪನಿಯು ನವೆಂಬರ್ 22ರಿಂದ ಡಿಸೆಂಬರ್ 6ರವರೆಗೆ ನೀರು ಉಳಿತಾಯ ಮಾಡುವ ಅಭಿಯಾನವೊಂದನ್ನು ನಡೆಸಲಿದೆ. ಇದರ ಅಡಿಯಲ್ಲಿ ಕಂಪನಿಯು, ತನ್ನ ಗ್ರಾಹಕರು ಸರ್ವಿಸಿಂಗ್‌ಗೆ ಬಂದಾಗ ಅವರು ಕಾರನ್ನು ಡ್ರೈವಾಶ್‌ ಮಾಡಿಸಲು ಪ್ರೋತ್ಸಾಹ ನೀಡಲಿದೆ.

‘ಈ ಅಭಿಯಾನದ ಮೂಲಕ ನಾವು ನಮ್ಮ ಗ್ರಾಹಕರಿಗೆ ನೀರನ್ನು ಬಳಸದೆಯೇ ಕಾರು ತೊಳೆಸುವಂತೆ ಪ್ರೇರಣೆ ನೀಡಲಿದ್ದೇವೆ’ ಎಂದು ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಸೇವಾ ವಿಭಾಗದ ನಿರ್ದೇಶಕ ತರುಣ್ ಗರ್ಗ್ ಅವರು ತಿಳಿಸಿದ್ದಾರೆ. 

ಈ ಅಭಿಯಾನದಲ್ಲಿ ಪಾಲ್ಗೊಳ್ಳುವ, ನೂರು ಅದೃಷ್ಟಶಾಲಿ ವಿಜೇತರಿಗೆ ಕಂಪನಿಯು ₹ 1,000 ಮೌಲ್ಯದ ಅಮೆಜಾನ್ ವೋಚರ್ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು