ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಇ.ವಿ ಮಾರುಕಟ್ಟೆ ಸೃಷ್ಟಿ: ಎಚ್ಎಂಎಸ್ಐ ಭವಿಷ್ಯದ ನೀಲನಕ್ಷೆ ಅನಾವರಣ

Last Updated 3 ಏಪ್ರಿಲ್ 2023, 21:11 IST
ಅಕ್ಷರ ಗಾತ್ರ

ಗುರುಗ್ರಾಮ: ಭಾರತದಲ್ಲಿ ಆರೋಗ್ಯಕರ ಮತ್ತು ಸುಸ್ಥಿರ ವಿದ್ಯುತ್‌ ಚಾಲಿತ ವಾಹನ (ಇ.ವಿ) ಮಾರುಕಟ್ಟೆ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ತನ್ನ ಎಲೆಕ್ಟ್ರಿಕ್ ವೆಹಿಕಲ್ ಮಾರ್ಗಸೂಚಿ ಪ್ರಕಟಿಸಿದೆ.

ಕಂಪನಿಯ ಭವಿಷ್ಯದ ಇ.ವಿ ಮಾರ್ಗಸೂಚಿಯನ್ನು ಎಚ್ಎಂಎಸ್ಐ ಅಧ್ಯಕ್ಷ ಮತ್ತು ಸಿಇಒ ಆದ ಅಟ್ಸುಶಿ ಒಗಾಟ, ಇತ್ತೀಚೆಗೆ ಗುರುಗ್ರಾಮದ ಉತ್ಪಾದನಾ ಘಟಕದಲ್ಲಿ ಪ್ರಸ್ತುತಪಡಿಸಿದರು.

‘ನಮ್ಮ ಅಭಿವೃದ್ಧಿಯ ನೀಲನಕ್ಷೆಯು, ಹೊಸ ಇ.ವಿ ತಂತ್ರಜ್ಞಾನ ಮತ್ತು ಮೂಲಸೌಕರ್ಯದತ್ತ ಗಮನ ಹರಿಸುವುದೇ ಆಗಿದೆ. 2040ರ ವೇಳೆಗೆ ಎಲೆಕ್ಟ್ರಿಕ್ ವಾಹನ ಮತ್ತು ಫ್ಯೂಯಲ್ ಸೆಲ್ ವೆಹಿಕಲ್ ಘಟಕಗಳಿಂದ ಆಗುವ ಮಾರಾಟ
ವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದು ಹೋಂಡಾದ ಜಾಗತಿಕ ಗುರಿಯಾಗಿದೆ. ಇದರ ಜೊತೆಗೆ, ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಅನ್ನು ಪರಿಚ
ಯಿಸುವ ಮೂಲಕ ನಾವು ‘ಐಸಿಇ’ ಎಂಜಿನ್‌ಗಳ ದಕ್ಷತೆ ಮತ್ತು ಸುಧಾರಣೆಯನ್ನು ಮುಂದುವರಿಸುತ್ತೇವೆ’ ಎಂದರು.

ಇ.ವಿ ಉತ್ಪಾದನಾ ಘಟಕ: ‘ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಪೂರೈಸಲು, ಕರ್ನಾಟಕದ ಎಚ್ಎಂಎಸ್ಐನ ನರಸಾ
ಪುರ ಸ್ಥಾವರದಲ್ಲಿ ಫ್ಯಾಕ್ಟರಿ-ಇ ಘಟಕವನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

‘ಮೇಕ್ ಇನ್ ಇಂಡಿಯಾ ಮತ್ತು ಸ್ಥಳೀಯ ಆದ್ಯತೆಗಳ ನಿರ್ದೇಶನಗಳಿಗೆ ಅನುಗುಣವಾಗಿ, ದೇಶೀಯ
ವಾಗಿ ತಯಾರಿಸಲಾದ ಇವಿ ಬ್ಯಾಟರಿ ಮತ್ತು ಪಿಸಿಯುನಂತಹ ಸಾಧನಗಳನ್ನು ಹೋಂಡಾ ಬಳಸುತ್ತದೆ. ಎಚ್ಎಂಎಸ್ಐನ ಎಲೆಕ್ಟ್ರಿಕ್‌ ವಾಹನಗಳಿಗಾಗಿ ಮೋಟರ್ ಅನ್ನು ಹೋಂಡಾ ವಿನ್ಯಾಸಗೊಳಿಸಿ, ಉತ್ಪಾದಿಸಲಿದೆ’ ಎಂದು ತಿಳಿಸಿದರು.

(ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ಗುರುಗ್ರಾಮಕ್ಕೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT