ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಂಡಾ ದ್ವಿ ಚಕ್ರ ವಾಹನ ಮಾರಾಟ ಹೆಚ್ಚಳ

Published 3 ಜೂನ್ 2024, 15:47 IST
Last Updated 3 ಜೂನ್ 2024, 15:47 IST
ಅಕ್ಷರ ಗಾತ್ರ

ನವದೆಹಲಿ: ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾದ (ಎಚ್‌ಎಂಎಸ್‌ಐ) ದೇಶೀಯ ಸಗಟು ಮಾರಾಟವು ಮೇ ತಿಂಗಳಲ್ಲಿ ಶೇ 45ರಷ್ಟು ಏರಿಕೆಯಾಗಿದ್ದು, 4.50 ಲಕ್ಷ ದ್ವಿ ಚಕ್ರ ವಾಹನಗಳು ಮಾರಾಟವಾಗಿವೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ಡೀಲರ್‌ಗಳಿಗೆ 3.11 ಲಕ್ಷ ದ್ವಿ ಚಕ್ರ ವಾಹನಗಳನ್ನು ಮಾರಲಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ. 

ರಫ್ತು 18,249ರಿಂದ 41,458ಕ್ಕೆ ಏರಿಕೆಯಾಗಿದೆ. ಒಟ್ಟು ವಾಹನಗಳ ಮಾರಾಟವು 3.29 ಲಕ್ಷದಿಂದ 4.92 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT