ರೆಪೊ ದರ ಇಳಿಕೆಯ ಪ್ರಯೋಜನವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಪೂರ್ತಿಯಾಗಿ ವರ್ಗಾಯಿಸಿದರೆ ಗೃಹ ವಾಹನ ಮತ್ತು ವೈಯಕ್ತಿಕ ಸಾಲದ ಮರುಪಾವತಿ ಕಂತುಗಳು ತುಸು ಕಡಿಮೆ ಆಗಲಿವೆ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಕಂತುಗಳ ಮೊತ್ತವು ಕಡಿಮೆ ಆಗಬೇಕು ಎಂದೇನೂ ಇಲ್ಲ. ರೆಪೊ ದರವು ತಗ್ಗಿದಾಗ ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡುತ್ತವೆ. ಇಎಂಐ (ಕಂತು) ಮೊತ್ತವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ಆಯ್ಕೆ. ಇಎಂಐ ಮೊತ್ತವನ್ನು ಹಾಗೆಯೇ ಇರಿಸಿಕೊಂಡು ಕಂತುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಇನ್ನೊಂದು ಆಯ್ಕೆ. ಗ್ರಾಹಕರು ತಮಗೆ ಅನುಕೂಲ ಆಗುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊದಲ ಆಯ್ಕೆಯ ಮೊರೆ ಹೋದವರಿಗೆ ಇಎಂಐ ಮೊತ್ತ ಇಳಿಕೆ ಆಗುತ್ತದೆ. ಎರಡನೆಯ ಆಯ್ಕೆಯನ್ನು ಒಪ್ಪಿದವರಿಗೆ ಇಎಂಐ ಮೊತ್ತ ಹಾಗೆಯೇ ಉಳಿದರೂ ಅವರ ಸಾಲವು ತುಸು ಬೇಗನೆ ಮರುಪಾವತಿ ಆಗುತ್ತದೆ.