ಶನಿವಾರ, ಜುಲೈ 31, 2021
27 °C

ಹೊಸತನದಲ್ಲಿ ಹೋಂಡಾ ಲಿವೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಬಿಎಸ್‌6ಗೆ ಪೂರಕವಾದ ಹೊಸ 110 ಸಿಸಿ ಬೈಕ್‌ ಲಿವೊ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 69,422 ಇದೆ.

‘ಬ್ರ್ಯಾಂಡ್‌ ಕುರಿತಾಗಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಕಂಪನಿಯ ಉದ್ದೇಶವು ಬಿಎಸ್‌6 ಸರಣಿಯಲ್ಲಿಯೂ  ಮುಂದುವರೆದಿದೆ’ ಎಂದು ಕಂಪನಿಯ ಮಾರಾಟ ವಿಭಾಗದ ನಿರ್ದೇಶಕ ಯದುವೀಂದರ್‌ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

‘2015ರಲ್ಲಿ ಬಿಡುಗಡೆ ಆದ ಲಿವೊ, ಇಂದಿಗೂ ಬಹಳಷ್ಟು ಜನರ ಫೇವರಿಟ್‌ ಬೈಕ್‌ ಆಗಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಮತ್ತು ನಗರ ಶೈಲಿಗೆ ಪೂರಕವಾದ ವಿನ್ಯಾಸದೊಂದಿಗೆ ಹೊಸ ಲಿವೊ ಅಭಿವೃದ್ಧಿಪಡಿಸಲಾಗಿದೆ’ ಎಂದೂ ಹೇಳಿದ್ದಾರೆ.

ಉದ್ಯಮದಲ್ಲೇ ಮೊದಲ ಬಾರಿಗೆ ಹೋಂಡಾ, ಲಿವೊ ಬಿಎಸ್-6 ಮೇಲೆ ಆರು ವರ್ಷಗಳ ವಿಶೇಷ ವಾರಂಟಿ ಪ್ಯಾಕೇಜ್ (ಮೂರು ವರ್ಷ ನಿಗದಿತ + 3 ವರ್ಷ ಐಚ್ಛಿಕ ವಿಸ್ತರಿತ ವಾರಂಟಿ) ಸಿಗಲಿದೆ. ಹೊಸ ಲಿವೊ ಬಿಎಸ್-6 ವಿತರಣೆ ಈ ವಾರವೇ ಆರಂಭವಾಗುತ್ತದೆ. ಇದು ಡ್ರಮ್ ಹಾಗೂ ಡಿಸ್ಕ್ ಅವತರಣಿಕೆಯಲ್ಲಿ ಲಭ್ಯ. 

ಹೊಸ ಎಸಿಜಿ ಸ್ಟಾರ್ಟರ್ ಮೋಟರ್ ತ್ವರಿತ, ನಿಶ್ಶಬ್ದ, ತಡೆ ಇಲ್ಲದ ಚಾಲನೆಯನ್ನು ಖಾತರಿಪಡಿಸುತ್ತದೆ. ಇಎಸ್‍ಪಿ (ವಿಸ್ತರಿತ ಸ್ಮಾರ್ಟ್ ಪವರ್) ನಿಂದ ಚಾಲಿತವಾದ 100ಸಿಸಿ ಎಚ್‍ಇಟಿ ಬಿಎಸ್-6 ಪಿಜಿಎಂ-ಎಫ್‍ಐ ಎಂಜಿನ್ ಹೊಂದಿದೆ.  

ಆರಾಮ ಮತ್ತು ಅನುಕೂಲತೆ

• ನಿರಂತರ ಪ್ರಖರ ಬೆಳಕಿಗೆ ಹೊಸ ಡಿಸಿ ಹೆಡ್‍ಲ್ಯಾಂಪ್

•  ಎಂಜಿನ್ ಸ್ಟಾರ್ಟ್ / ಸ್ಟಾಪ್ ಸ್ವಿಚ್

• ದೂರ ಅಂತರದ ಸವಾರಿಗೆ ನೆರವಾಗುವ ಉದ್ದದ ಆರಾಮದಾಯಕ ಆಸನ

•  ನವೀಕೃತ ಡಿಜಿಟಲ್ ಅನಲಾಗ್ ಮೀಟರ್

• ಡ್ರಮ್ ಮತ್ತು ಡಿಸ್ಕ್ – ಎರಡು ಅವತರಣಿಕೆಗಳಲ್ಲಿ ಲಭ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು