ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಬ್ಯಾಂಕ್‌: ಇನ್‌ಸ್ಟಾ ಎಜುಕೇಷನ್‌ ಲೋನ್‌

Last Updated 22 ಜೂನ್ 2020, 14:40 IST
ಅಕ್ಷರ ಗಾತ್ರ

ಮುಂಬೈ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌, ತನ್ನ ಗ್ರಾಹಕರಿಗೆ ಸುಲಭವಾಗಿ ಶಿಕ್ಷಣ ಸಾಲ ಸಿಗುವಂತೆ ಮಾಡಲು ಇನ್‌ಸ್ಟಾ ಎಜುಕೇಷನ್‌ ಲೋನ್‌ ಸೌಲಭ್ಯ ಆರಂಭಿಸಿದೆ.

ಉನ್ನತ ಶಿಕ್ಷಣ ಮಾಡಲು ಬಯಸುವವರು ಈ ಸಾಲ ಸೌಲಭ್ಯದಡಿ ₹ 1 ಕೋಟಿಯವರೆಗೂ ತಕ್ಷಣವೇ ಸಾಲ ಮಂಜೂರು ಪತ್ರ ಪಡೆಯಬಹುದಾಗಿದೆ.

ಇದು,ಸಂಪೂರ್ಣವಾಗಿ ಡಿಜಿಟಲ್‌ ಪ್ರಕ್ರಿಯೆಯಾಗಿದ್ದು, ಇಂಟರ್‌ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲಕ ಸಾಲಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ಗ್ರಾಹಕರು ಖಾತೆಯಲ್ಲಿ ಎಷ್ಟು ಮೊತ್ತದ ಎಫ್‌ಡಿ ಇಟ್ಟಿದ್ದಾರೆ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತ ನಿರ್ಧಾರವಾಗಲಿದೆ. ಸಾಲದ ಮೊತ್ತ ಮತ್ತು ಮರುಪಾವತಿ ಅವಧಿಯನ್ನೂ ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸಾಲ ಮಂಜೂರಾತಿ ಪತ್ರವನ್ನು ನೀಡಿವಿಶ್ವವಿದ್ಯಾಲಯಗಳಲ್ಲಿ ದಾಖಲಾತಿ ಮಾಡಿಸಿಕೊಳ್ಳಬಹುದು. ಗ್ರಾಹಕರ ಇ–ಮೇಲ್‌ ವಿಳಾಸಕ್ಕೆ ಸಾಲದ ಅನುಮತಿ ಪತ್ರ ಬರಲಿದೆ.

ಗ್ರಾಹಕರು ತಮ್ಮ ಎಫ್‌ಡಿಯ ಶೇ 90ರಷ್ಟು ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಸಹೋದರ/ಸಹೋದರಿ, ಮಕ್ಕಳು, ಮೊಮ್ಮಕ್ಕಳಿಗೂ ಸಾಲ ಪಡೆಯಬಹುದಾಗಿದೆ.

ಸಾಲದ ಮೊತ್ತವು ₹ 10 ಲಕ್ಷದಿಂದ ₹ 1 ಕೋಟಿಯವರೆಗಿದ್ದು, ದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಿಸಿಕೊಳ್ಳಲು ₹ 10 ಲಕ್ಷದಿಂದ ₹ 50ಲಕ್ಷದವರೆಗೆ ಸಾಲ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT