ಬೆಂಗಳೂರು: ವಿಮಾ ವಲಯದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ತೆರಿಗೆ ನಂತರದ ಲಾಭದ (ಪಿಎಟಿ) ಪ್ರಮಾಣದಲ್ಲಿ ಶೇ 34.2ರಷ್ಟು ಬೆಳವಣಿಗೆ ಸಾಧಿಸಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಪ್ರಮಾಣದ ಏರಿಕೆ ಆಗಿದೆ. ಭವಿಷ್ಯದಲ್ಲಿ ಸಿಗುವ ಲಾಭಗಳ ಇಂದಿನ ಮೌಲ್ಯವನ್ನು ಹೇಳುವ ‘ಹೊಸ ವಹಿವಾಟುಗಳ ಮೌಲ್ಯ’ವು (ವಿಎನ್ಬಿ) ₹ 457 ಕೋಟಿ ಆಗಿದೆ ಎಂದು ಕಂಪನಿ ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಪ್ರೀಮಿಯಂ ಮೊತ್ತದಲ್ಲಿನ ಬೆಳವಣಿಗೆ ದರವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.1ರಷ್ಟಿದೆ. ವಿಮಾ ಉತ್ಪನ್ನಗಳ ವಿತರಣೆ ವ್ಯಾಪಕವಾಗಿ ನಡೆದಿರುವುದು ಹಾಗೂ ಎಲ್ಲ ಆಯಾಮಗಳನ್ನು ಒಳಗೊಳ್ಳುವ ಉತ್ಪನ್ನಗಳನ್ನು ನೀಡಿದ್ದುದು ಇದಕ್ಕೆ ಕಾರಣವಾಗಿದೆ ಎಂದು ಕಂಪನಿ ಹೇಳಿದೆ.

2025ರ ಜೂನ್ 30ರ ವೇಳೆಗೆ ಕಂಪನಿಯು ನಿರ್ವಹಿಸುತ್ತಿರುವ ಆಸ್ತಿಗಳ ಒಟ್ಟು ಮೌಲ್ಯವು ₹3.2 ಲಕ್ಷ ಕೋಟಿಗೆ ತಲುಪಿದೆ. ಗ್ರಾಹಕರು ಕಂಪನಿಯ ಮೇಲೆ ಇರಿಸಿರುವ ವಿಶ್ವಾಸ, ಹೊಸ ವಹಿವಾಟುಗಳಲ್ಲಿ ಆಗಿರುವ ಹೆಚ್ಚಳ, ನಿಧಿಯನ್ನು ನಿರ್ವಹಿಸುವ ಬಗೆಯ ಬಹಳ ಚೆನ್ನಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.