ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಬಿಐ ಬ್ಯಾಂಕ್‌ಗೆ ಜಿಎಸ್‌ಟಿ ನೋಟಿಸ್‌

Published 7 ಮೇ 2024, 14:07 IST
Last Updated 7 ಮೇ 2024, 14:07 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಹೆಚ್ಚುವರಿಯಾಗಿ ಪಡೆದ ಆರೋಪದ ಮೇಲೆ ಬಡ್ಡಿ ಮತ್ತು ದಂಡದೊಂದಿಗೆ ₹2.97 ಕೋಟಿ ಜಿಎಸ್‌ಟಿ ಪಾವತಿಸುವಂತೆ ಐಡಿಬಿಐ ಬ್ಯಾಂಕ್‌ಗೆ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.

ತೆರಿಗೆ ಇಲಾಖೆಯು 2018-19 ಹಣಕಾಸು ವರ್ಷಕ್ಕೆ ಸಂಬಂಧಿಸಿದ ಜಿಎಸ್‌ಟಿ ನಿಯಮಗಳ ಅಡಿಯಲ್ಲಿ ಐಟಿಸಿಯ ಹೆಚ್ಚುವರಿ ಲಾಭ ಮತ್ತು ಬಳಕೆಗಾಗಿ ನೋಟಿಸ್‌ ನೀಡಿದೆ ಎಂದು ಬ್ಯಾಂಕ್‌ ಷೇರುಪೇಟೆಗೆ ಮಂಗಳವಾರ ತಿಳಿಸಿದೆ.

₹1.42 ಕೋಟಿ ತೆರಿಗೆ, ₹1.41 ಕೋಟಿ ದಂಡ ಮತ್ತು ₹14 ಲಕ್ಷ ಬಡ್ಡಿ ಪಾವತಿಸಲು ಸೂಚಿಸಲಾಗಿದೆ. ಕಾನೂನಿನ ಪ್ರಕಾರ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಐಡಿಬಿಐ ಬ್ಯಾಂಕ್ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT