ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು (ಐಐಪಿ) ಮಾರ್ಚ್ ತಿಂಗಳಿನಲ್ಲಿ ಶೇ 3ರಷ್ಟು ದಾಖಲಾಗಿದೆ.

2024ರ ಮಾರ್ಚ್ನಲ್ಲಿ ಶೇ 5.5ರಷ್ಟು ದಾಖಲಾಗಿತ್ತು. ತಯಾರಿಕಾ, ಗಣಿಗಾರಿಕೆ ಮತ್ತು ವಿದ್ಯುತ್ ವಲಯದಲ್ಲಿ ಉತ್ಪಾದನೆ ಇಳಿಕೆಯಾಗಿದೆ. ಇದರಿಂದ ಸೂಚ್ಯಂಕ ಇಳಿದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಸೋಮವಾರ ತಿಳಿಸಿದೆ.

ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಣಿಗಾರಿಕೆ ಮತ್ತು ವಿದ್ಯುತ್ ವಲಯದ ಉತ್ಪಾದನೆಯು ಕ್ರಮವಾಗಿ ಶೇ 1.3 ಮತ್ತು ಶೇ 8.6ರಷ್ಟಿತ್ತು. ಅದು ಪ್ರಸಕ್ತ ಮಾರ್ಚ್ನಲ್ಲಿ ಶೇ 0.4 ಮತ್ತು ಶೇ 6.3ಕ್ಕೆ ಇಳಿದಿದೆ ಎಂದು ತಿಳಿಸಿದ್ದಾರೆ.

2021–22ರ ಆರ್ಥಿಕ ವರ್ಷದಲ್ಲಿ ಶೇ 11.4ರಷ್ಟು ಬೆಳವಣಿಗೆ ದಾಖಲಾಗಿತ್ತು. 2022–23ರಲ್ಲಿ ಶೇ 5.2, 2023–24ರಲ್ಲಿ ಶೇ 5.9 ಮತ್ತು 2024–25ರಲ್ಲಿ ಶೇ 4ರಷ್ಟು ದಾಖಲಾಗಿದೆ. ಇದು ನಾಲ್ಕು ವರ್ಷದ ಕನಿಷ್ಠ ಮಟ್ಟವಾಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.