ಮುಂಬೈ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡಲು ನೀತು ಡೇವಿಡ್ ನೇತೃತ್ವದ ಸಮಿತಿ ಮಂಗಳವಾರ ಇಲ್ಲಿ ಸಭೆ ಸೇರಲಿದೆ. ಸ್ಫೋಟಕ ಬ್ಯಾಟರ್ ಶಫಾಲಿ ಶರ್ಮಾ ಮತ್ತು ವೇಗಿ ರೇಣುಕಾ ಠಾಕೂರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಸಮಿತಿ ಮುಂದಿರುವ ಕಠಿಣ ಸವಾಲಾಗಿದೆ.

ಸೆ.30ರಿಂದ ಎಂಟು ತಂಡಗಳನ್ನು ಒಳಗೊಂಡ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಪಾಕಿಸ್ತಾನ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.

ಏಪ್ರಿಲ್ನಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಈಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನು ವಶಮಾಡಿಕೊಂಡು ಚಾರಿತ್ರಿಕ ಸಾಧನೆ ಮೆರೆದಿದೆ. ಸತತ ಸರಣಿಗಳನ್ನು ಗೆದ್ದಿರುವ ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡವು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಇಂಗ್ಲೆಂಡ್ನಲ್ಲಿ (3, 47, 31 ಮತ್ತು 75) ಸ್ಥಿರ ಪ್ರದರ್ಶನ ನೀಡಿದ್ದ 21 ವರ್ಷದ ಶಫಾಲಿ, ಆಸ್ಟ್ರೇಲಿಯಾ ಎ ತಂಡದ ವಿರುದ್ಧ (3, 3 ಮತ್ತು 41 ರನ್) ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರ ಸ್ಥಾನದ ಬಗ್ಗೆ ಕುತೂಹಲವಿದೆ. ಗಾಯದ ಕಾರಣದಿಂದಾಗಿ ಇಂಗ್ಲೆಂಡ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದ ಅನುಭವಿ ವೇಗಿ ರೇಣುಕಾ ಅವರಿಗೆ ತಂಡದಲ್ಲಿ ಮತ್ತೆ ಮಣೆ ಹಾಕುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.