ಸೋಮವಾರ, ಮೇ 23, 2022
22 °C

ಷೇರು ಮಾರಾಟಕ್ಕೆ ಒಎನ್‌ಜಿಸಿಗೆ ಕೇಂದ್ರ ಸೂಚನೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಒಎನ್‌ಜಿಸಿ ಕಂಪನಿಯು (ಆಯಿಲ್ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್ ಕಾರ್ಪೊರೇಷನ್) ಎರಡು ಪ್ರಮುಖ ತೈಲ ಮತ್ತು ಅನಿಲ ನಿಕ್ಷೇಪಗಳಲ್ಲಿ ಹೊಂದಿರುವ ಪಾಲಿನಲ್ಲಿ ಶೇಕಡ 60ರಷ್ಟನ್ನು ಖಾಸಗಿಯವರಿಗೆ ಮಾರಾಟ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚಿಸಿದೆ. ಒಎನ್‌ಜಿಸಿ ಪಾಲನ್ನು ಹೀಗೆ ಮಾರಾಟ ಮಾಡುವುದರಿಂದ ಉತ್ಪಾದನೆಯು ಹೆಚ್ಚಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ದೇಶವು ತನ್ನ ತೈಲ ಅಗತ್ಯಗಳಿಗಾಗಿ ವಿದೇಶಗಳನ್ನು ಅವಲಂಬಿಸುವುದು ಕ್ರಮೇಣ ಜಾಸ್ತಿ ಆಗಿದೆ. ಖಾಸಗಿ ಕಂಪನಿಗಳಿಗೆ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಬೇಕು ಎಂಬ ಮಾತನ್ನು ಒಎನ್‌ಜಿಸಿ ಕಂಪನಿಯು ಪಾಲಿಸಲೇಬೇಕು ಎಂಬುದೇನೂ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.