ನವದೆಹಲಿ: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕಮಟ್ಟದ ವಸತಿ ಬೆಲೆ ಏರಿಕೆಯಲ್ಲಿ ಭಾರತವು 18ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ತಲುಪಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್ ತಿಳಿಸಿದೆ.

ದೇಶದಲ್ಲಿ ವಸತಿ ಬೆಲೆಯು ವರ್ಷದಿಂದ ವರ್ಷಕ್ಕೆ ಸುಮಾರು ಶೇ 6ರಷ್ಟು ಏರಿಕೆಯಾಗುತ್ತಿದೆ.

ಹೆಚ್ಚಿನ ಬಡ್ಡಿದರದ ಮೂಲಕ ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಹರಸಾಹಸ ನಡೆಸುತ್ತಿವೆ. ಈ ಪ್ರಯತ್ನದ ಹೊರತಾಗಿಯೂ ವಾರ್ಷಿಕವಾಗಿ ಮನೆ ಬೆಲೆಯು ದೇಶದಲ್ಲಿ ಏರುಗತಿಯಲ್ಲಿದೆ. ವಾರ್ಷಿಕ ಸರಾಸರಿ ಬೆಲೆ ಏರಿಕೆಯ ಬೆಳವಣಿಗೆಯು ಶೇ 3.5ರಷ್ಟಿದೆ. ಇದು ಕೋವಿಡ್ ಸಾಂಕ್ರಾಮಿಕ ಪೂರ್ವದ ಹತ್ತು ವರ್ಷಗಳ ಹಿಂದೆ ಇದ್ದ ಸರಾಸರಿ ಶೇ 3.7ರಷ್ಟಕ್ಕೆ ಸಮೀಪಿಸುತ್ತಿದೆ ಎಂದು ನೈಟ್ ಫ್ರಾಂಕ್ ವಿವರಿಸಿದೆ.

ಮನೆ ಸಾಲದ ದರ ಹೆಚ್ಚಳ ಮತ್ತು ಹಣದುಬ್ಬರದ ಸವಾಲಿನ ಹೊರತಾಗಿಯೂ ದೇಶದ ವಸತಿ ಮಾರುಕಟ್ಟೆಯ ಬೆಳವಣಿಗೆಯ ಆಶಾದಾಯಕವಾಗಿದೆ. ಇದರಿಂದ ಸ್ಥಿರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.