ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಪುನರ್ಬಳಕೆ: ಭಾರತಕ್ಕೆ ನಾಲ್ಕನೆಯ ಸ್ಥಾನ

Last Updated 21 ಜೂನ್ 2022, 13:37 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನವನ್ನು ಸಂಸ್ಕರಿಸಿ, ಪುನರ್ಬಳಕೆ ಮಾಡುವಲ್ಲಿ ಭಾರತವು ಜಗತ್ತಿನಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ ಎಂದು ವಿಶ್ವ ಚಿನ್ನ ಸಮಿತಿಯು (ಡಬ್ಲ್ಯುಜಿಸಿ) ಹೇಳಿದೆ.

2013ರಿಂದ 2021ರ ನಡುವಿನ ಅವಧಿಯಲ್ಲಿ ದೇಶದ ಚಿನ್ನ ಸಂಸ್ಕರಣೆ ಸಾಮರ್ಥ್ಯವು ಶೇಕಡ 500ರಷ್ಟು ಹೆಚ್ಚಳ ಕಂಡಿದೆ ಎಂದು ಡಬ್ಲ್ಯುಜಿಸಿ ಬಿಡುಗಡೆ ಮಾಡಿರುವ ‘ಚಿನ್ನದ ಸಂಸ್ಕರಣೆ ಹಾಗೂ ಪುನರ್ಬಳಕೆ’ ವರದಿಯು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ದೇಶಕ್ಕೆ ಪೂರೈಕೆಯಾದ ಒಟ್ಟು ಚಿನ್ನದಲ್ಲಿ ಶೇಕಡ 11ರಷ್ಟು, ‘ಹಳೆಯ ಚಿನ್ನ’ದ ‍ಪುನರ್ಬಳಕೆಯಿಂದ ಸಿಕ್ಕಿದ್ದು ಎಂದು ವರದಿಯು ಹೇಳಿದೆ. ‘ಚಿನ್ನದ ಸಂಸ್ಕರಣೆಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಕೇಂದ್ರವಾಗಿ ಬೆಳವಣಿಗೆ ಕಾಣುವ ಸಾಮರ್ಥ್ಯವು ಭಾರತಕ್ಕೆ ಇದೆ’ ಎಂದು ಡಬ್ಲ್ಯುಜಿಸಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪಿ.ಆರ್. ಸೋಮಸುಂದರಂ ಹೇಳಿದ್ದಾರೆ.

‘ಚಿನ್ನಾಭರಣಗಳನ್ನು ಜನ ತಮ್ಮ ಬಳಿ ಇರಿಸಿಕೊಳ್ಳುವ ಅವಧಿಯು ಕಡಿಮೆ ಆಗಲಿದೆ. ಏಕೆಂದರೆ, ಯುವ ಗ್ರಾಹಕರು ಚಿನ್ನಾಭರಣ ವಿನ್ಯಾಸವನ್ನು ಮತ್ತೆ ಮತ್ತೆ ಬದಲಾಯಿಸಲು ಬಯಸುತ್ತಾರೆ. ಚಿನ್ನದ ಪುನರ್ಬಳಕೆ ಹೆಚ್ಚಾಗುವುದಕ್ಕೆ ಇದು ಕೊಡುಗೆ ನೀಡಬಹುದು. ಪ್ರೋತ್ಸಾಹಕ ಕ್ರಮಗಳ ಮೂಲಕ ಚಿನ್ನದ ಪುನರ್ಬಳಕೆ ಹೆಚ್ಚು ವ್ಯವಸ್ಥಿತವಾಗಿ ಆಗುವಂತೆ ಮಾಡುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಪಿಟಿಐ ವರದಿ (ಮುಂಬೈ): ಭಾರತವು 2021ರಲ್ಲಿ ಒಟ್ಟು 75 ಟನ್ ಚಿನ್ನವನ್ನು ‍ಪುನರ್ಬಳಕೆ ಮಾಡಿಕೊಂಡಿದೆ. ಚಿನ್ನದ ಪುನರ್ಬಳಕೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಇಟಲಿ ಮತ್ತು ಅಮೆರಿಕ ಕ್ರಮವಾಗಿ ಎರಡು ಹಾಗೂ ಮೂರನೆಯ ಸ್ಥಾನಗಳಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT