ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ಇಂಧನ ಬೇಡಿಕೆ ಚೇತರಿಕೆ

Last Updated 10 ಜುಲೈ 2021, 12:34 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಮತ್ತು ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಜೂನ್‌ನಲ್ಲಿ ದೇಶದ ಇಂಧನ ಬೇಡಿಕೆಯು ಚೇತರಿಕೆ ಹಾದಿಗೆ ಮರಳಿದೆ.ಮೇ ತಿಂಗಳಿನಲ್ಲಿ ಇಂಧನ ಬೇಡಿಕೆಯು ಒಂಭತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿತ್ತು.

2020ರ ಜೂನ್‌ಗೆ ಹೋಲಿಸಿದರೆ 2021ರ ಜೂನ್‌ನಲ್ಲಿ ಇಂಧನ ಬಳಕೆ ಶೇ 1.5ರಷ್ಟು ಹೆಚ್ಚಾಗಿದ್ದು, 1.63 ಕೋಟಿ ಟನ್‌ಗಳಷ್ಟಾಗಿದೆ. 2021ರ ಮೇ ತಿಂಗಳಿಗೆ ಹೋಲಿಸಿದರೆ ಬಳಕೆ ಪ್ರಮಾಣ ಶೇ 8ರಷ್ಟು ಏರಿಕೆ ಆಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ದಲ್ಲಿ (ಪಿಪಿಎಸಿ) ಈ ಮಾಹಿತಿ ಇದೆ.

ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ವರ್ಷದ ಜೂನ್‌ನಲ್ಲಿ ಪೆಟ್ರೋಲ್‌ ಮಾರಾಟವು ಶೇ 5.6ರಷ್ಟು ಹೆಚ್ಚಾಗಿದ್ದು, ₹ 24 ಲಕ್ಷ ಟನ್‌ಗಳಿಗೆ ತಲುಪಿದೆ. ಡೀಸೆಲ್‌ ಮಾರಾಟವು ಶೇ 1.5ರಷ್ಟು ಇಳಿಕೆ ಕಂಡಿದೆ.

ಮಾರ್ಚ್‌ ಬಳಿಕ ತಿಂಗಳೊಂದರಲ್ಲಿ ಮೊದಲ ಏರಿಕೆ ಇದಾಗಿದೆ. ಕೋವಿಡ್‌ನ ಎರಡನೇ ಅಲೆಯು ಬರುವುದಕ್ಕೂ ಮೊದಲು ಇಂಧನ ಬೇಡಿಕೆಯು ಮಾರ್ಚ್‌ನಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ಎರಡನೇ ಅಲೆಯನ್ನು ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಮತ್ತು ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿದ್ದರಿಂದ ಮೇನಲ್ಲಿ ಇಂಧನ ಬೇಡಿಕೆ ಕುಸಿತ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT