ನವದೆಹಲಿ: ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಈ ವರ್ಷ ಒಂದು ಹಂತ ಮೇಲೆ ಏರಿದೆ.

ನಿಯಂತ್ರಣ ಕ್ರಮಗಳಲ್ಲಿನ ಸುಧಾರಣೆ, ಮಾರುಕಟ್ಟೆ ಕುರಿತ ಉತ್ತಮ ಮಾಹಿತಿ, ಅಭಿವೃದ್ಧಿ ಕುರಿತ ಪರಿಸರ ಕಾಳಜಿ ಪರಿಗಣನೆ ಮತ್ತಿತರ ಕ್ರಮಗಳಿಂದ ಎರಡು ವರ್ಷಗಳ ಹಿಂದೆ 35ನೇ ಸ್ಥಾನದಲ್ಲಿದ್ದ ಭಾರತ ಈಗ 34ನೇ ಸ್ಥಾನಕ್ಕೆ ಏರಿಕೆಯಾಗಿದೆ.

ರಿಯಲ್ ಎಸ್ಟೇಟ್ ವಲಯದ ಸುಧಾರಣೆಗಾಗಿ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 2016 (ರೇರಾ) ಮತ್ತು ಜಿಎಸ್‌ಟಿ, ಬೇನಾಮಿ ವಹಿವಾಟು ನಿರ್ಬಂಧ (ತಿದ್ದುಪಡಿ) ಕಾಯ್ದೆ, ದಿವಾಳಿ ಸಂಹಿತೆ (ಐಬಿಸಿ) ಹಾಗೂ ಭೂ ದಾಖಲೆಗಳ ಡಿಜಿಟಲೀಕರಣವು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತಂದುಕೊಟ್ಟಿದೆ.ದೇಶದ ರಿಯಲ್ ಎಸ್ಟೇಟ್‌ನ ಹೂಡಿಕೆ ಬಗ್ಗೆ ಸಾಂಸ್ಥಿಕ ಹೂಡಿಕೆದಾರರಲ್ಲಿ ಹೆಚ್ಚು ಆಸಕ್ತಿ ಕಂಡು ಬರುತ್ತಿದೆ. ಸದ್ಯಕ್ಕೆ ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ‘ಅರೆ ಪಾರದರ್ಶಕ ವಲಯ’ದಲ್ಲಿ ಇರಿಸಲಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್ ತಿಳಿಸಿದೆ.

ಪಾರದರ್ಶಕ ಸೂಚ್ಯಂಕದ 99 ದೇಶಗಳ ಸಾಲಿನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿ ಇದೆ. ನಂತರದ ಸ್ಥಾನದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಕೆನಡಾ, ನ್ಯೂಜಿಲೆಂಡ್, ನೆದರ್ಲೆಂಡ್, ಐರ್ಲೆಂಡ್, ಸ್ವೀಡನ್ ಮತ್ತು ಜರ್ಮನಿ ದೇಶಗಳಿವೆ.

ಮೊದಲ 10 ದೇಶಗಳು ಗರಿಷ್ಠ ಪಾರದರ್ಶಕತೆಯ ಮತ್ತು 11 ರಿಂದ 33 ಸ್ಥಾನದಲ್ಲಿನ ದೇಶಗಳು ಪಾರದರ್ಶಕ ದೇಶಗಳೆಂದು ವರ್ಗೀಕರಿಸಲಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಮೀಕ್ಷೆ ನಡೆಯುತ್ತಿದೆ.

ರಿಯಲ್ ಎಸ್ಟೇಟ್ ಪಾರದರ್ಶಕ ಸ್ಥಾನಮಾನ

ದೇಶ; ಶ್ರೇಯಾಂಕ

ಇಂಗ್ಲೆಂಡ್; 1

ಅಮೆರಿಕ; 2

ಆಸ್ಟ್ರೇಲಿಯಾ; 3

ಚೀನಾ; 32

ಭಾರತ;34

ಶ್ರೀಲಂಕಾ; 65

ಪಾಕಿಸ್ತಾನ;73

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.