* ಒಮಾನ್ನಿಂದ ಭಾರತಕ್ಕೆ ಆಮದಾಗುವ ಹೈನುಗಾರಿಕಾ ಉತ್ಪನ್ನಗಳು, ಚಾಕೊಲೇಟ್, ಚಿನ್ನ, ಬೆಳ್ಳಿ, ಆಭರಣ, ಪಾದರಕ್ಷೆ, ಕ್ರೀಡಾ ಸರಕುಗಳಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ. ಈ ಮೂಲಕ ಭಾರತವು ತನ್ನ ಕೃಷಿಕರ ಹಾಗೂ ಎಂಎಸ್ಎಂಇ ವಲಯದ ಹಿತವನ್ನುಕಾಯ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

* ಚಹಾ, ಕಾಫಿ, ರಬ್ಬರ್, ತಂಬಾಕಿನ ಉತ್ಪನ್ನಗಳು, ಹಲವು ಕೃಷಿ ಉತ್ಪನ್ನಗಳಿಗೆ ಭಾರತವು ತೆರಿಗೆ ವಿನಾಯಿತಿ ನೀಡಿಲ್ಲ.

* ಖರ್ಜೂರ, ಅಮೃತಶಿಲೆ, ಪೆಟ್ರೊಕೆಮಿಕಲ್ ಉತ್ಪನ್ನಗಳಿಗೆ ಕೋಟಾ ನಿಗದಿ ಮಾಡಲಾಗುತ್ತದೆ. ಆ ಕೋಟಾ ಮಿತಿಯಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಕೋಟಾದಲ್ಲಿ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಉತ್ಪನ್ನಗಳು ಭಾರತಕ್ಕೆ ಆಮದಾದಲ್ಲಿ ಅವುಗಳಿಗೆ ನಿಗದಿತ ಸುಂಕ ವಿಧಿಸಲಾಗುತ್ತದೆ.

* ಅಮೃತಶಿಲೆಯನ್ನು ರಫ್ತು ಮಾಡುವುದಕ್ಕೆ ಒಮಾನ್ ನಿಷೇಧ ಹೇರಿದ್ದರೂ ಭಾರತದ ಮಟ್ಟಿಗೆ ಆ ನಿಷೇಧವನ್ನು ಸಡಿಲಿಸಲಾಗಿದೆ ಎಂದು ಒಮಾನ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

* ನೈಸರ್ಗಕ ಜೇನುತುಪ್ಪ, ಗೋಡಂಬಿ, ಆಲೂಗೆಡ್ಡೆ, ಬೋನ್ಲೆಸ್ ಮಾಂಸ, ಬೇಕರಿ ಉತ್ಪನ್ನಗಳು ಭಾರತದಿಂದ ಒಮಾನ್ ಮಾರುಕಟ್ಟೆಯನ್ನು ಸುಂಕರಹಿತವಾಗಿ ಪ್ರವೇಶಿಸಬಹುದು.

* ಭಾರತದಿಂದ ಬರುವ ಚೀಸ್, ಮೊಸರು, ಹಾಲು, ಘನೀಕರಿಸಿದ ಮೀನು, ಬೆಣ್ಣೆ, ಮಾಂಸ, ಯೋಗರ್ಟ್, ಬ್ರೆಡ್, ಪೇಸ್ಟ್ರಿ, ಕೇಕ್, ಚಾಕಲೇಟ್, ಸಕ್ಕರೆಯ ತಿನಿಸು, ಖನಿಜಯುಕ್ತ ನೀರಿನ ಮೇಲಿನ ಸುಂಕವನ್ನು ತೆಗೆಯುವುದಾಗಿ ಒಮಾನ್ ಹೇಳಿದೆ.

* ವರ್ಷವೊಂದರಲ್ಲಿ ಒಮಾನ್ನಿಂದ 2,000 ಟನ್ವರೆಗೆ ಖರ್ಜೂರವನ್ನು ಸುಂಕರಹಿತವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಬಹುದು.

* ಒಮಾನ್ನಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳು ಅಲ್ಲಿನ ಕಚೇರಿಗಳಲ್ಲಿ ಕೆಲಸ ಮಾಡಬೇಕಿರುವ ಸಿಬ್ಬಂದಿಯ ಪೈಕಿ ಶೇ 50ರಷ್ಟು ಮಂದಿಯನ್ನು ಭಾರತದ ಕಚೇರಿಯಿಂದ ಕರೆಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.