ನವದೆಹಲಿ: ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಮೆರಿಕದ ಭಾರಿ ಪ್ರಮಾಣದ ಸುಂಕ ಹೇರಿಕೆಯಿಂದ ಸಿಗುತ್ತಿರುವ ಸುವರ್ಣಾವಕಾಶವನ್ನು ಭಾರತದ ಆಟಿಕೆ ಉತ್ಪಾದಕರು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಅಮೆರಿಕದ ಖರೀದಿದಾರರು ಭಾರತದ ಆಟಿಕೆ ಉತ್ಪಾದಕರನ್ನು ಸಂಪರ್ಕಿಸುತ್ತಿದ್ದಾರೆ.
.ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಮೋದಿ ಔತಣಕೂಟ.
ಅಮೆರಿಕಕ್ಕೆ ರಫ್ತು ಮಾಡುವ ಸಾಮರ್ಥ್ಯವಿರುವ 40 ಸಂಸ್ಥೆಗಳನ್ನು ಭಾರತೀಯ ಆಟಿಕೆ ಸಂಘವು ಗುರುತಿಸಿದೆ.

ಸದ್ಯ 20 ಸಂಸ್ಥೆಗಳು ಅಮೆರಿಕದ ಮಾರುಕಟ್ಟೆಗೆ ಆಟಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುತ್ತಿವೆ ಎಂದು ಆಟಿಕೆ ಸಂಘದ ಅಧ್ಯಕ್ಷ ಅಜಯ್ ಅಗರವಾಲ್ ಪಿಟಿಐಗೆ ತಿಳಿಸಿದ್ದಾರೆ.
.US-China Trade War | ಅಮೆರಿಕ ಸುಂಕದ ಅಂಕಿಯಾಟಕ್ಕೆ ಸೊಪ್ಪು ಹಾಕುವುದಿಲ್ಲ: ಚೀನಾ.
‘ಕಳೆದೊಂದು ತಿಂಗಳಿನಿಂದ ಅಮೆರಿಕದ ಖರೀದಿದಾರರಿಂದ ನಮಗೆ ಹಲವು ವಿಚಾರಣೆಗಳು ಬರುತ್ತಿವೆ. ಅಮೆರಿಕದ ನೀತಿ ನಿಯಮಾನುಸಾರ ಆಟಿಕೆ ತಯಾರಿಸಲು ಸಾಮರ್ಥ್ಯ ಇರುವ ಉತ್ಪಾದಕರ ಮಾಹಿತಿ ಬಯಸಿ ಭಾರತೀಯ ರಫ್ತು ಕಂಪನಿಗಳು ನಮ್ಮನ್ನು ಸಂಪರ್ಕಿಸಿವೆ. ಅಮೆರಿಕದ ಆಟಿಕೆ ಮಾರುಕಟ್ಟೆಗೆ ಸೂಕ್ತವಾಗುವ ಬಿಳಿ ಲೇಬಲ್ ಹಾಗೂ ಅಸಲಿ ಉತ್ಪಾದಕರನ್ನು ಅವರ ಎದುರು ನೋಡುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
.ಚೀನಾ ವಿರುದ್ಧದ ಪ್ರತಿಸುಂಕ ಶೇ 245ಕ್ಕೆ ಏರಿಕೆ: ಶ್ವೇತಭವನ.
ಅಮೆರಿಕಕ್ಕೆ ರಫ್ತು ಮಾಡಲು ಸಾಮರ್ಥ್ಯವಿರುವ ಉತ್ಪಾದಕರನ್ನು ಸೇರಿಸಿ ಸಂಘವು ಶೀಘ್ರವೇ ಸೆಮಿನಾರ್ ನಡೆಸಲಿದೆ. ವಿಶ್ವದಲ್ಲೇ ಅಮೆರಿಕ ಅತಿ ದೊಡ್ಡ ಆಟಿಕೆ ಮಾರುಕಟ್ಟೆಯಾಗಿರುವುದರಿಂದ ಭಾರತೀಯ ಉತ್ಪಾದಕರಿಗೆ ಇದು ಸುವರ್ಣ ಅವಕಾಶ ಎಂದು ಅಗರ್ವಾಲ್ ಹೇಳಿದ್ದಾರೆ.

ಅಮೆರಿಕ ಆಟಿಕೆಯ ಭಾರಿ ದೊಡ್ಡ ಮಾರುಟ್ಟೆಯಾಗಿದ್ದು, ಚೀನಾದ ಮೇಲೆ ಹೇರಿರುವ ಭಾರಿ ಪ್ರಮಾಣದ ಸುಂಕದಿಂದಾಗಿ ಭಾರತಕ್ಕೆ ಲಾಭವಾಗಲಿದೆ.

ಜಾಗತಿಕ ಆಟಿಕೆ ರಫ್ತಿನಲ್ಲಿ ಭಾರತದ ಪಾಲು ಶೇ 1ಕ್ಕಿಂತ ಕಡಿಮೆ ಇದ್ದು, ಸರ್ಕಾರದ ನೆರವಿನಿಂದ ಇದು ಹೆಚ್ಚಳ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.
.ಇ–ವಾಹನಗಳ ಬ್ಯಾಟರಿ ಸ್ಫೋಟ ತಡೆಗಟ್ಟಲು ನಿಯಮ ಬಿಗಿಗೊಳಿಸಿದ ಚೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.