ಬೀಜಿಂಗ್: ಬ್ಯಾಟರಿ ಚಾಲಿತ ವಾಹನಗಳಲ್ಲಿ ಆಗಾಗ್ಗ ಸ್ಫೋಟ ಸಂಭವಿಸುವ ಹಾಗೂ ಬೆಂಕಿ ಕಾಣಿಸಿಕೊಳ್ಳುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಇ–ವಾಹನಗಳ ತಯಾರಕರಿಗೆ ನಿಯಮ ಬಿಗಿಗೊಳಿಸಿದೆ.

ಬ್ಯಾಟರಿ ಚಾಲಿತ ವಾಹನ ಲೋಕವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದಲ್ಲಿ ಒಟ್ಟು ಮಾರಾಟವಾಗುತ್ತಿರುವ ಕಾರುಗಳಲ್ಲಿ ಬ್ಯಾಟರಿ ಚಾಲಿತ ಮತ್ತು ಪ್ಲಗ್ ಇನ್ ಹೈಬ್ರಿಡ್ಗಳ ಸಂಖ್ಯೆ ದೊಡ್ಡದಿದೆ. ಇವುಗಳಿಗೆ ತಾಂತ್ರಿಕ ಮಾನದಂಡಗಳನ್ನು ಹೊರಡಿಸಲಾಗಿದೆ ಎಂದು ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

‘ಬ್ಯಾಟರಿಗಳು ಸ್ಫೋಟ ಅಥವಾ ಬೆಂಕಿ ನಿರೋಧಕ ಎಂದು ಖಾತ್ರಿಪಡಿಸಿಕೊಳ್ಳಲು ತಯಾರಿಕಾ ಹಂತದಲ್ಲೇ ಕಟ್ಟುನಿಟ್ಟಿನ ಪರೀಕ್ಷೆ ನಡೆಸುವುದು ಕಡ್ಡಾಯ. ಇದರಿಂದ ಚಾಲಕ ಹಾಗೂ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸುರಕ್ಷತೆಯೂ ಮುಖ್ಯ’ ಎಂದಿದೆ.

ಈ ಹೊಸ ನಿಯಮವು 2026ರ ಜುಲೈನಿಂದ ಜಾರಿಗೆ ಬರಲಿದೆ. 2020ರಿಂದ ಇಲ್ಲಿಯವರೆಗೂ ಇದ್ದ ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೆ ಏರಿಸಿರುವ ಬ್ಯಾಟರಿ ಚಾಲಿತ ವಾಹನ ತಯಾರಕರು, ಅಪಾಯ ಎದುರಾಗುವ ಐದು ನಿಮಿಷಗಳ ಮೊದಲು ಎಚ್ಚರಿಕೆ ಸಂದೇಶ ನೀಡುವ ಸೌಲಭ್ಯವನ್ನು ಅಳವಡಿಸಿವೆ. ಜತೆಗೆ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬ್ಯಾಟರಿ ಮೇಲಾಗುವ ಆಘಾತವನ್ನು ತಡೆದುಕೊಳ್ಳುವುದನ್ನು ಮತ್ತು ತ್ವರಿತ ಚಾರ್ಜ್ನಿಂದ ಉಂಟಾಗಬಹುದಾದ ಅಪಾಯಗಳನ್ನೂ ಸರಿಪಡಿಸಿವೆ.

ಚೀನಾದಲ್ಲಿ ಬ್ಯಾಟರಿ ಚಾಲಿತ ಹಾಗೂ ಹೈಬ್ರಿಡ್ ವಾಹನಗಳ ಮಾರಾಟವು 2015ಕ್ಕೆ ಹೋಲಿಸಿದರೆ 2025ರಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಇದು 2035ರ ಹೊತ್ತಿಗೆ ಶೇ 50ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2024ರಲ್ಲಿ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಬ್ಯಾಟರಿ ಚಾಲಿತ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಡಿಮೆ. ಷಿಯೋಮಿ ತಯಾರಿಸಿದ ಎಸ್ಯುವಿ ಕಳೆದ ಮಾರ್ಚ್ನಲ್ಲಿ ಅಪಘಾತಕ್ಕೀಡಾಗಿದ್ದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಕಾರು ಪ್ರತಿ ಗಂಟೆಗೆ 97 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು. ಜತೆಗೆ ಆಟೊ ಚಾಲಕ ವ್ಯವಸ್ಥೆಯೂ ಬಳಕೆಯಲ್ಲಿತ್ತು. ಈ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇವಿ ವಾಹನಗಳ ಭವಿಷ್ಯದ ಕುರಿತು ಪ್ರಶ್ನೆಗಳನ್ನು ಮೂಡಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.