ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆ: ಮಾರ್ಚ್‌ 31ರಿಂದ ವಾರಕ್ಕೆ 24 ಸಾವಿರ ಬಾರಿ ವಿಮಾನಗಳ ಹಾರಾಟ

Published 21 ಮಾರ್ಚ್ 2024, 11:06 IST
Last Updated 21 ಮಾರ್ಚ್ 2024, 11:06 IST
ಅಕ್ಷರ ಗಾತ್ರ

ನವದೆಹಲಿ: ಬೇಸಿಗೆ ಆರಂಭವಾಗಿದ್ದರಿಂದ ಜನರ ಪ್ರಯಾಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಭಾರತದ ವಿಮಾನಯಾನ ಸಂಸ್ಥೆಗಳು ದೇಶದೊಳಗೆ ವಾರಕ್ಕೆ 24,275 ಬಾರಿ ಕಾರ್ಯಾಚರಣೆ ನಡೆಸಲಿವೆ.

ಮಾರ್ಚ್‌ 31ರಿಂದ ಈ ಕಾರ್ಯಾಚರಣೆ ಆರಂಭವಾಗಲಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 6ರಷ್ಟು ಹೆಚ್ಚು ವಿಮಾನಗಳ ಹಾರಾಟವನ್ನು ನಡೆಸಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಪ್ರಕಾರ, ಚಳಿಗಾಲಯದಲ್ಲಿ ವಿಮಾನಗಳು ವಾರಕ್ಕೆ 23,732 ಬಾರಿ ಕಾರ್ಯಾಚರಣೆ ನಡೆಸಿವೆ. ಇಂಡಿಗೊ, ಏರ್‌ ಇಂಡಿಯಾ ಹಾಗೂ ವಿಸ್ತಾರಾ ತನ್ನ ವಿಮಾನಗಳ ಕಾರ್ಯಾಚರಣೆ ಹೆಚ್ಚಿಸಿವೆ. ಆದರೆ ಸ್ಪೈಸ್‌ಜೆಟ್ 2024ರ ಬೇಸಿಗೆಗೆ ತನ್ನ ಕಾರ್ಯಚರಣೆಯನ್ನು ತಗ್ಗಿಸಲಿದೆ ಎಂದು ವರದಿಯಾಗಿದೆ.

ವಿದೇಶಗಳಿಗೂ ಹೆಚ್ಚಿನ ವಿಮಾನಗಳು

ಬೇಸಿಗಾಗಿ ಭಾರತದ ವಿಮಾಯಾನ ಸಂಸ್ಥೆಗಳು 37 ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಇದರಲ್ಲಿ ಅಮೆರಿಕ, ಐರೋಪ್ಯ ರಾಷ್ಟ್ರಗಳು, ಉಝ್ಬೇಕಿಸ್ತಾನ್, ಮಾಲ್ದೀವ್ಸ್‌, ಜಾರ್ಜಿಯಾ ಹಾಗೂ ಅಝರ್‌ಬೈಜಾನ್‌ ಪ್ರಮುಖ ರಾಷ್ಟ್ರಗಳು. ದೇಶದ 27 ವಿಮಾನ ನಿಲ್ದಾಣಗಳ ಮೂಲಕ ಅಂತರರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತಿವೆ.

ದೇಶದ ವಿಮಾನಯಾನ ಸಂಸ್ಥೆಗಳು ವಾರದಲ್ಲಿ 1,922 ಬಾರಿ ಅಂತರರಾಷ್ಟ್ರೀಯ ಹಾರಾಟ ನಡೆಸುತ್ತವೆ. ಇದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 5.1ರಷ್ಟು ಹೆಚ್ಚಳವಾಗಿದೆ. ಆಕಾಶ ಏರ್‌ ಸಂಸ್ಥೆಯು ಮಾರ್ಚ್ 28ರಿಂದ ತನ್ನ ಅಂತರರಾಷ್ಟ್ರೀಯ ಹಾರಾಟ ನಡೆಸಲಿದೆ. 

ದೇಶದ 125 ವಿಮಾನ ನಿಲ್ದಾಣಗಳಿಂದ ಈ ಬೇಸಿಗೆಯಲ್ಲಿ 24,275 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಇದರಲ್ಲಿ ಆಜಂನಗರ, ಅಲಿಗಢ, ಚಿತ್ರಕೂಟ, ಗೋಂಡಿಯಾ, ಜಲಗಾಂವ್, ಮೊಹ್ರಾದಬಾದ್‌ ಹಾಗೂ ಪತ್ತೋರಗಢದಲ್ಲಿ ಹೊಸ ವಿಮಾನ ನಿಲ್ದಾಣಗಳ ಮೂಲಕವೂ ವಿಮಾನ ಹಾರಾಟ ನಡೆಸಲಿವೆ ಎಂದು ಡಿಜಿಸಿಎ ಹೇಳಿದೆ.

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಶೇ 13.82ರಷ್ಟು ವಿಮಾನಯಾನ ಪ್ರಮಾಣ ಹೆಚ್ಚಿಸಿದೆ. ಏರ್‌ ಇಂಡಿಯಾ ಶೇ 4.59ರಷ್ಟು ಕಾರ್ಯಾಚರಣೆ ಹೆಚ್ಚಿಸಲಿದೆ. ವಿಸ್ತಾರಾ ಶೇ 25.22ರಷ್ಟು, ಆಕಾಶ ಏರ್‌ ಶೇ 14.30ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT